More

    ಡಿವೋರ್ಸ್‌ ನಂತ್ರವೂ ಪತ್ನಿಯ ಜತೆ ಓಡಾಡಿಕೊಂಡಿದ್ದ ಹೃತಿಕ್‌ ಇದೀಗ ಹೊಸಬಳ ಜತೆ ಹೋಟೆಲ್‌ನಲ್ಲಿ! ಯಾರೀಕೆ ನೋಡಿ…

    ಮುಂಬೈ: ಮದುವೆ, ವಿಚ್ಛೇದನ, ವಿವಾಹೇತರ ಸಂಬಂಧ, ಡೇಟಿಂಗ್‌… ಇಂಥವೆಲ್ಲವೂ ಚಿತ್ರರಂಗದಲ್ಲಿ ಸಾಮಾನ್ಯ ಎನಿಸಿಬಿಟ್ಟಿದೆ. ದಿಢೀರ್‌ ಮದುವೆಯಾಗುವುದು, ಅಷ್ಟೇ ವೇಗದಲ್ಲಿ ಡಿವೋರ್ಸ್‌ ಕೊಡುವುದು ನಂತರ ಇನ್ನೊಬ್ಬಳ ಜತೆ ತಿರುಗುವುದು ಇಲ್ಲವೇ ಮದುವೆಯಾಗಿರುವಾಗಲೇ ಇನ್ನೊಬ್ಬರ ಜತೆ ಸಂಬಂಧ ಹೊಂದುವುದು.. ಹೀಗೆ ಅನೇಕ ವಿಷಯಗಳಿಂದ ಸೆಲಿಬ್ರಿಟಿಗಳು ಸುದ್ದಿಯಾಗುತ್ತಲೇ ಇರುತ್ತಾರೆ. ಅವರ ಸಾಲಿಗೆ ಸೇರಿದ್ದಾರೆ ಖ್ಯಾತ ಬಾಲಿವುಡ್‌ ತಾರೆ ಹೃತಿಕ್‌ ರೋಷನ್‌.

    ಹಿಂದೊಮ್ಮೆ ಮದುವೆಯಾದ ಬಳಿಕವೂ ನಟಿ ಕಂಗನಾ ರಣಾವತ್‌ ಜತೆಗೆ ಸಂಬಂಧ ಹೊಂದಿ ನಂತರ ಆಕೆಗೆ ಮೋಸ ಮಾಡಿರುವ ಗಂಭೀರ ಆರೋಪ ಹೊತ್ತಿರುವ ಹೃತಿಕ್‌ ರೋಷನ್‌, ಪತ್ನಿ ಸೂಸನ್‌ಗೆ 2014ರಲ್ಲಿ ವಿಚ್ಛೇದನ ಕೊಟ್ಟಿದ್ದಾರೆ. ಇಬ್ಬರು ಮಕ್ಕಳನ್ನು ಪಡೆದ ಬಳಿ ತಮ್ಮ 14 ವರ್ಷದ ದಾಂಪತ್ಯ ಜೀವನವನ್ನು ಅಂತಿಮಗೊಳಿಸಿದ್ದ ನಟ, ವಿಚ್ಛೇದನದ ನಂತರವೂ ಪತ್ನಿ, ಮಕ್ಕಳೊಂದಿಗೆ ಇದ್ದರು. ಒಟ್ಟಿಗೇ ಟ್ರಿಪ್‌ಗೆ ಹೋಗಿಯೂ ಸುದ್ದಿಯಾಗಿದ್ದರು.

    ಬಾಲಿವುಡ್​ನ ಮೋಸ್ಟ್​ ಹ್ಯಾಂಡ್​ಸಮ್​, ಗ್ರೀಕ್​ ಗಾಡ್​ ಎಂದೆಲ್ಲಾ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿರುವ ಹೃತಿಕ್‌, ನಟಿ ಸಬಾ ಆಜಾದ್ ಜತೆ ಹೃತಿಕ್‌ ರೋಷನ್‌ ಹೋಟೆಲ್‌ ಒಂದರಲ್ಲಿ ಕಾಣಿಸಿಕೊಂಡಿದ್ದು, ಭಾರಿ ಗುಸುಗುಸು ಶುರುವಾಗಿದೆ. ಸದಾ ತಮ್ಮ ವೈಯಕ್ತಿಕ ಜೀವನದ ವಿಚಾರಗಳನ್ನು ರಹಸ್ಯವಾಗಿ ಇಡುವಲ್ಲಿ ಪ್ರಸಿದ್ಧಿ ಹೊಂದಿರುವ ಹೃತಿಕ್‌ ರಾತ್ರಿ ಡಿನ್ನರ್‌ಗೆ ಸಬಾ ಜತೆ ಕೈಕೈ ಹಿಡಿದು ಹೋಗಿದ್ದು ಭಾರಿ ಸುದ್ದಿಯಾಗಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ.

    ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಸಬಾ ಆಜಾದ್​ ರಂಗಭೂಮಿ ನಟಿ ಕೂಡ ಹೌದು. ಚಿತ್ರರಂಗಕ್ಕೆ 2008ರಲ್ಲಿ ಕಾಲಿಟ್ಟಿದ್ದರು. 2008ರಲ್ಲಿ ಸಬಾ ಆಜಾದ್ ‘ದಿಲ್ ಕಬಡ್ಡಿ’ ಅನ್ನುವ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು. ಬಳಿಕ 2011ರಲ್ಲಿ ತೆರೆಕಂಡ ‘ಮುಜ್ಸೆ ಫ್ರೆಂಡ್‌ಶಿಪ್ ಕರೋಗೆ’ ಚಿತ್ರದಲ್ಲಿ ನಟಿಸಿದ್ದರು. ಬಳಿಕ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಇವರು ಇದಾಗಲೇ ಸಾಕಷ್ಟು ಮ್ಯೂಸಿಕ್​ ವಿಡಿಯೋ​ಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ವಿವಾಹೇತರ ಸಂಬಂಧದಿಂದ ಮಗು ಆದರೆ ಆಕೆ ಪುರುಷನ ಪತ್ನಿ ಎನಿಸಿಕೊಳ್ತಾಳಾ? ಕಾನೂನು ಏನು ಹೇಳುತ್ತದೆ?

    ನಟಿಯರಿಬ್ಬರ ಜಟಾಪಟಿ: ಜಾಲತಾಣದಲ್ಲಿ ಬಿಸಿಬಿಸಿ ವಾತಾವರಣ ಸೃಷ್ಟಿಸಿದ ‘ಶಮಿತಾ ಆಂಟಿ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts