

ಮೆಕ್ಸಿಕೊ : ಮೆಟ್ರೋ ರೈಲು ಹೋಗುವ ಮೇಲ್ಸೇತುವೆ ಕುಸಿದ ಪರಿಣಾಮ ಮೆಟ್ರೊ ರೈಲು ಹಳಿ ತಪ್ಪಿ ಅಪಘಾತ ಸಂಭವಿಸಿದ್ದು 13 ಮಂದಿ ಮೃತಪಟ್ಟಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಘಟನೆಯಲ್ಲಿ 70ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗಳಾಗಿವೆ.
ಮೆಕ್ಸಿಕೋದ ರಾಜಧಾನಿಯ ದಕ್ಷಿಣದಲ್ಲಿ ಸ್ಥಳೀಯ ಕಾಲಮಾನ ರಾತ್ರಿ 10:30ಕ್ಕೆ ಈ ಘಟನೆ ಸಂಭವಿಸಿದೆ. ಮೆಟ್ರೋದ ಲೈನ್ 12 ರಲ್ಲಿ ಅಪಘಾತ ಸಂಭವಿಸಿದೆ
ಮೇಲ್ಸೆತುವೆ ಕುಸಿಯುತ್ತಿದ್ದ ವೇಳೆ ರೈಲಿನ ಸಂಚಾರ ಸಾಗಿತ್ತು. ಇದರಿಂದ ಈ ದುರಂತ ಸಂಭವಿಸಿದೆ. ಸೇತುವೆ ಕುಸಿಯುತ್ತಿದ್ದಂತೆಯೇ ಮೆಟ್ರೊ ಬುಡಮೇಲಾಗಿ ಬಿದ್ದಿದೆ. ಅದರ ಅವಶೇಷಗಳಡಿ ಜನರು ಸಿಲುಕಿಕೊಂಡು ಒದ್ದಾಡುವ ದೃಶ್ಯ ಕಂಡುಬಂದಿದೆ.
ಸದ್ಯ 13 ಮಂದಿಯ ಶವವನ್ನು ಹೊರಕ್ಕೆ ತೆಗೆಯಲಾಗಿದ್ದು, ಸಾವಿನ ಸಂಖ್ಯೆ ಇನ್ನೂ ಅಧಿಕವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.