ಮಾಸ್ಕ್​ ಏಕೆ ಧರಿಸಿಲ್ಲ ಎಂದು ಕೇಳಿದವನನ್ನು 27 ಬಾರಿ ಚಾಕುವಿನಿಂದ ತಿವಿದ ಅಕ್ಕ-ತಂಗಿ!

mask
Published on

ಚಿಕಾಗೊ: ಕರೊನಾ ವೈರಸ್​ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಮಾಸ್ಕ್​ಗಳನ್ನು ಕಡ್ಡಾಯ ಮಾಡಲಾಗಿದೆ. ಮಾಸ್ಕ್​ ಧರಿಸಿಲ್ಲವೆಂದು ಪೊಲೀಸರು ಪ್ರಶ್ನಿಸಿದಾಗ, ಜನರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯುವುದು ಮಾಮೂಲು. ಆದರೆ ಸಹೋದರಿಯರು ಮಾಸ್ಕ್​ ಹಾಕಿಲ್ಲವೆಂದು ಪ್ರಶ್ನೆ ಮಾಡಿದವನನ್ನೇ ತಿವಿದು ಸಾಯಿಸಿದ್ದಾರೆ!

ಇಂಥದ್ದೊಂದು ಭಯಾನಕ ಘಟನೆ ನಡೆದಿರುವುದು ಚಿಕಾಗೋದಲ್ಲಿ. ಶಾಪಿಂಗ್ ಮಾಡಲು ಬಂದಿದ್ದ ಈ ಅಕ್ಕ-ತಂಗಿ ಮಾಸ್ಕ್​ ಧರಿಸಿರಲಿಲ್ಲ. ಶಾಪಿಂಗ್​ ಮಾಲ್​ಗಳಲ್ಲಿ ಮಾಸ್ಕ್​ ಕಡ್ಡಾಯ ಇರುವಾಗ ಅದನ್ನು ಏಕೆ ಧರಿಸಿಲ್ಲ ಎಂದು ಭದ್ರತಾ ಸಿಬ್ಬಂದಿ ಪ್ರಶ್ನಿಸಿದ್ದಾನೆ.

ಇದು ಮೂವರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ. ಜತೆಗೆ ಈ ಸಹೋದರಿಯರು ಅಲ್ಲಿಯೇ ಇಟ್ಟಿದ್ದ ಸ್ಯಾನಿಟೈಸರ್​ಗಳನ್ನು ಕೂಡ ಬಳಸಿರಲಿಲ್ಲ. ಮಾಸ್ಕ್​ ಧರಿಸದೇ, ಸ್ಯಾನಿಟೈಸರ್​ ಬಳಸದೇ ಹೋದರೆ ಪ್ರವೇಶವಿಲ್ಲ ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾನೆ. ಇದರಿಂದ ಸಿಟ್ಟುಗೊಂಡ ಈ ಸಹೋದರಿಯರು ಆತನನ್ನು ಒಂದಲ್ಲಾ.... ಎರಡಲ್ಲಾ.... 27 ಬಾರಿ ತಿವಿದು ತಿವಿದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಭದ್ರತಾ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜೆಸ್ಸಿಕಾ ಮತ್ತು ಜಯಲಾ ಹಿಲ್ ಎಂಬ ಈ ಸಹೋದರಿಯನ್ನು ಪೊಲೀಸರು ಬಂಧಿಸಿದ್ದಾರೆ. ಜೆಸ್ಸಿಕಾ ಕಾವಲುಗಾರನನ್ನು ಹಿಂಭಾಗ, ಎದೆ ಮತ್ತು ತೋಳುಗಳಲ್ಲಿ ಇರಿದರೆ, ಆದರೆ ಅವಳ ಸಹೋದರಿ ಅವನ ಕೂದಲಿನಿಂದ ಹಿಡಿದಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ.

ಆತ್ಮರಕ್ಷಣೆಗಾಗಿ ಇವರು ಈ ರೀತಿ ಮಾಡಿದರು ಎಂದು ಸಹೋದರಿಯರ ಪರ ವಕೀಲರು ವಾದ ಮಂಡಿಸಿದ್ದಾರೆ. ಇಬ್ಬರೂ ಮಾನಸಿಕವಾಗಿ ಅಸ್ವಸ್ಥರಾಗಿರುವುದಾಗಿಯೂ ಅವರು ಹೇಳಿದ್ದಾರೆ. ಆದರೆ ಇಬ್ಬರನ್ನೂ ಬಂಧಿಸಲಾಗಿದೆ, ವಿಚಾರಣೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net