ಮಾರ್ಷಲ್‌ ಆರ್ಟ್‌ ಗ್ಯಾಲರಿಯಲ್ಲಿ ಅಗ್ನಿ ಅನಾಹುತ: 18 ಮಕ್ಕಳು ಸುಟ್ಟುಕರಕಲು- ಹಲವರಿಗೆ ಗಂಭೀರ ಗಾಯ

fire
Published on

ಬೀಜಿಂಗ್: ಮಧ್ಯ ಚೀನಾದ ಮಾರ್ಷಲ್ ಆರ್ಟ್‌ ಗ್ಯಾಲರಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 18 ಮಂದಿ ಮಕ್ಕಳು ಸುಟ್ಟುಕರಕಲಾಗಿರುವ ಘಟನೆ ನಡೆದಿದೆ. ಘಟನೆಯಲ್ಲಿ ಹಲವಾರು ಮಂದಿಗೆ ಗಂಭೀರ ಗಾಯಗಳಾಗಿವೆ.ಮೃತಪಟ್ಟವರಲ್ಲಿ ಹೆಚ್ಚಿನವರು 7 ರಿಂದ 16 ವರ್ಷದೊಳಗಿನವರಾಗಿದ್ದಾರೆ.

ಹೇನಾನ್ ಪ್ರಾಂತ್ಯದ ಜೇಚಂಗ್‌ ಕೌಂಟಿಯಲ್ಲಿ ಈ ಘಟನೆ ಸಂಭವಿಸಿದೆ. ಭಾರತೀಯ ಕಾಲಮಾನದಲ್ಲಿ ನಸುಕಿನ ವೇಳೆ ಬೆಂಕಿ ಅವಘಡ ಸಂಭವಿಸಿದ್ದು, ಇದಕ್ಕೆ ನಿಖರ ಕಾರಣಗಳು ಸ್ಪಷ್ಟವಾಗಿಲ್ಲ.

ಈ ಸಮಯದಲ್ಲಿ ಇಲ್ಲಿರುವ ಆರ್ಟ್‌ ಗ್ಯಾಲರಿಯಲ್ಲಿ 34 ವಿದ್ಯಾರ್ಥಿಗಳಿದ್ದರು. ಅವರ ಪೈಕಿ ಹಲವರು ಮೃತಪಟ್ಟಿದ್ದು, ಕೆಲವರ ಸ್ಥಿತಿ ಚಿಂತಾಜನಕನವಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net