ಮದುವೆಯಾಗೋದಾದ್ರೆ ಕೌನ್ಸೆಲಿಂಗ್‌ ಕಡ್ಡಾಯ- ವಿಚ್ಛೇದನ ತಡೆಗೆ ಸರ್ಕಾರದಿಂದ ಹೀಗೊಂದು ಕಾನೂನು

counselling
ಸಾಂದರ್ಭಿಕ ಚಿತ್ರ
Published on

ಪಣಜಿ: ವಿಚ್ಛೇದನ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವ ವಿಷಯ ಹಳೆಯದಾಗಿದೆ. ಈ ಪ್ರಕರಣಗಳು ಎಷ್ಟರಮಟ್ಟಿಗೆ ಏರುತ್ತಿವೆ ಎಂದು ಹಲವು ರಾಜ್ಯಗಳಲ್ಲಿ ಕೌಂಟುಬಿಕ ಕೋರ್ಟ್‌ಗಳ ಸಂಖ್ಯೆ 2-3 ಪಟ್ಟು ಹೆಚ್ಚು ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.

ಇದೇ ರೀತಿ ಮುಂದುವರೆದರೆ ಭವಿಷ್ಯದಲ್ಲಿ ಭಾರಿ ಅನಾಹುತ ಆಗಬಹುದು ಎನ್ನುವ ಕಾರಣಕ್ಕೆ ಗೋವಾ ಸರ್ಕಾರ ಹೊಸದೊಂದು ಕಾನೂನು ತರಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಕಲ ಸಿದ್ಧತೆ ನಡೆಸಲಾಗಿದೆ. ದಂಪತಿ ನಡುವೆ ಸಾಮರಸ್ಯದ ಕೊರತೆ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿರುವುದು ಮದುವೆ ಮುರಿದು ಬೀಳಲು ಕಾರಣ ಎಂಬ ಅಂಶವನ್ನು ಮನಗಂಡಿರುವ ಗೋವಾ ಸರ್ಕಾರ, ಮದುವೆ ನಿಗದಿಯಾಗುತ್ತಿದ್ದಂತೆಯೇ ಭಾವಿ ದಂಪತಿಗೆ ಕೌನ್ಸಿಲಿಂಗ್‌ ಕಡ್ಡಾಯಗೊಳಿಸಲಿದೆ.

ಗೋವಾ ಕಾನೂನು ಸಚಿವ ನಿಲೇಶ್ ಕ್ಯಾಬ್ರಾಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಗೋವಾ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಆ್ಯಂಡ್ ರೂರಲ್ ಡೆವಲಪ್‍ಮೆಂಟ್ (ಜಿಐಪಿಎಆರ್ ಡಿ) ಕೌನ್ಸೆಲಿಂಗ್ ಕೋರ್ಸ್ ಹಾಗೂ ಇದರ ಸ್ವರೂಪವನ್ನು ಅಂತಿಮಗೊಳಿಸಲಿದ, ಇದನ್ನು ಕಡ್ಡಾಯಗೊಳಿಸಿದರೆ ವಿಚ್ಛೇದನ ಪ್ರಕರಣಗಳನ್ನು ಸಾಕಷ್ಟು ಮಟ್ಟಿಗೆ ತಡೆಗಟ್ಟಬಹುದು ಎಂದು ಅವರು ಹೇಳಿದ್ದಾರೆ.

ವಿವಾಹವಾಗಿ 6 ತಿಂಗಳಿಂದ 1 ವರ್ಷದ ಅವಧಿಯಲ್ಲಿ ಹೆಚ್ಚು ಜನ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ಹೀಗಾಗಿ ವಿವಾಹಕ್ಕೂ ಮೊದಲು ಕೌನ್ಸಲಿಂಗ್ ನಡೆಸುವುದು ಅನಿವಾರ್ಯವಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net