VIDEO: ಬೈಕ್‌ನಲ್ಲಿ ಬಂದ... ಅತ್ತಿತ್ತ ನೋಡಿದ...ಮಹಿಳೆಯರ ಒಳ ಉಡುಪು ಕದ್ದು ಡಿಕ್ಕಿಯಲ್ಲಿ ಸೇರಿಸಿ ಪರಾರಿಯಾದ..

theif
Published on

ಮೀರತ್‌ (ಉತ್ತರ ಪ್ರದೇಶ): ಕೆಲವು ವಿಕೃತ ಮನಸ್ಥಿತಿಯುಳ್ಳವರು, ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ವಿಧವಿಧವಾದ ವಿಚಿತ್ರ ವರ್ತನೆಗಳನ್ನು ಮಾಡುವುದು ಸಹಜ. ಅದರಲ್ಲಿ ಒಂದು ಮಹಿಳೆಯರ ಒಳ ಉಡುಪುಗಳನ್ನು ಕದಿಯುವುದು.

ಆ ಉಡುಪಿನ ಆಸು ಪಾಸು ಬೆಲೆ ಬಾಳುವ ವಸ್ತುವಿದ್ದರೂ ಅವರಿಗೆ ಅದು ಬೇಡ, ಆದರೆ ಒಳ ಉಡುಪು ಕದಿಯುವುದರಲ್ಲಿಯೇ ಅವರಿಗೆ ವಿಚಿತ್ರ ಸಂತೋಷ ಸಿಗುತ್ತದೆ. ಇದೊಂದು ಮಾನಸಿಕ ಕಾಯಿಲೆ ಎಂದು ಮನೋಶಾಸ್ತ್ರಜ್ಞರು ಹೇಳುತ್ತಾರೆ.

ಮನೆಯ ಕಾಂಪೌಂಡ್‌ನಲ್ಲಿ ಒಣಗಿಸುತ್ತಿದ್ದ ಮಹಿಳೆಯ ಒಳ ಉಡುಪುಗಳು ದಿನವೂ ಕಣ್ಮರೆಯಾಗುತ್ತಿದ್ದುದು ಉತ್ತರ ಪ್ರದೇಶದ ಮೀರತ್‌ನ ಹಲವರನ್ನು ಅಚ್ಚರಿಗೊಳಿಸಿತ್ತು. ಉಳಿದ ಬಟ್ಟೆಗಳೆಲ್ಲವೂ ಸರಿಯಾಗಿಯೇ ಇರುವಾಗ ಈ ಉಡುಪುಗಳು ಮಾತ್ರ ಕಾಣೆಯಾಗುತ್ತಿದ್ದವು.

ಹೀಗೆ ದಿನವೂ ಇದೇ ರೀತಿಯಾಗುತ್ತಿದ್ದರಿಂದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ನಂತರ ಸಮೀಪದ ಸಿಸಿಟಿವಿಯನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಒಬ್ಬ ವ್ಯಕ್ತಿ ಬೈಕ್‌ನಲ್ಲಿ ಬಂದು ಈ ಉಡುಪು ಕದಿಯುತ್ತಿರುವುದು ಕಂಡುಬಂದಿದೆ.

ಮೀರತ್​​ನ ಸದರ್​ ಬಜಾರ್​ನಲ್ಲಿ ಮಹಿಳೆಯರ ಒಳ ಉಡುಪು ಕಾಣೆಯಾಗುತ್ತಿದ್ದದರ ಹಿಂದೆ ಇವನದ್ದೇ ಕೃತ್ಯ ಇರುವುದಾಗಿ ಪೊಲೀಸರು ಹೇಳಿದ್ದಾರೆ. ಸದ್ಯ ಈತನ ಗಾಡಿನ ನಂಬರ್‌ ಸಿಸಿಟಿವಿ ಮೂಲಕ ಪಡೆದುಕೊಂಡಿರುವ ಪೊಲೀಸರು ಅವನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಈತ ಒಳ ಉಡುಪಿ ಕದಿಯುತ್ತಿರುವ ಸಿಸಿಟಿವಿ ದೃಶ್ಯ ಇದೀಗ ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಹೇಗೆ ಈತ ಬರುತ್ತಿದ್ದ ಎಂದು ಇಲ್ಲಿದೆ ನೋಡಿ ವೈರಲ್‌ ವಿಡಿಯೋ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net