ಫೇಸ್​ಬುಕ್​, ಟ್ವಿಟರ್​, ಇನ್​ಸ್ಟಾಗ್ರಾಂ ಎಲ್ಲದ್ದಕ್ಕೂ ಗುಡ್​ಬೈ ಎಂದ ಆಮೀರ್​- ಕಾರಣ ಇಲ್ಲಿದೆ ನೋಡಿ...

amirkhan
Published on

ಮುಂಬೈ : ಕೆಲವು ನಟ- ನಟಿಯರು ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿರುತ್ತಾರೆ. ತಮ್ಮ ದಿನನಿತ್ಯದ ಆಗುಹೋಗುಗಳನ್ನು ಅವುಗಳಲ್ಲಿ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅಂಥವರಲ್ಲಿ ಒಬ್ಬರು ಬಾಲಿವುಡ್​ ನಟ ಆಮೀರ್​ ಖಾನ್​. ಆದರೆ ಈ ನಟ ಈಗ ಸೋಷಿಯಲ್​ ಮೀಡಿಯಾಗೆ ಗುಡ್​ಬೈ ಹೇಳಿದ್ದಾರೆ.

ಸದ್ಯ ನಾನು ಟ್ವಿಟರ್‍, ಫೇಸ್‍ಬುಕ್, ಇನ್‍ಸ್ಟಾಗ್ರಾಂ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿಲ್ಲ. ಸದ್ಯದ ಮಟ್ಟಿಗೆ ಎಲ್ಲದ್ದಕ್ಕೂ ಗುಡ್​ಬೈ ಹೇಳುತ್ತಿದ್ದೇನೆ ಎಂದು ಆಮೀರ್​ ಖಾನ್​ ಹೇಳಿಕೊಂಡಿದ್ದಾರೆ. ಈ ಕುರಿತು ಟ್ವಿಟರ್​ನಲ್ಲಿ ಹೇಳಿಕೆ ನೀಡಿರುವ ಖಾನ್​, ಇದು ನನ್ನ ಕೊನೆಯ ಪೋಸ್ಟ್. ಸಾಮಾಜಿಕ ಜಾಲತಾಣ ಬಳಕೆ ನಿಲ್ಲಿಸುತ್ತಿರುವುದಾಗಿ ಹೇಳಿದ್ದಾರೆ.

ಅದಕ್ಕೆ ಅವರು ಕೊಟ್ಟಿರುವ ಕಾರಣ ಎಂದರೆ, ಸಿನಿಮಾಗಳ ಮೇಲೆ ಹೆಚ್ಚು ಗಮನ ಹರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣವನ್ನು ನಿಲ್ಲಿಸುತ್ತಿದ್ದೇನೆ. ತಮ್ಮ ಮುಂದಿನ ಸಿನಿಮಾ ಸೇರಿದಂತೆ ಎಲ್ಲ ಮಾಹಿತಿಗಳು ಅಮೀರ್ ಖಾನ್ ಪ್ರೊಡಕ್ಷನ್ಸ್‌ನ ಅಧಿಕೃತ ಸಾಮಾಜಿಕ ಮಾಧ್ಯಮಗಳ ಮೂಲಕ ಲಭ್ಯವಾಗಲಿವೆ ಎಂದಿದ್ದಾರೆ.

ಅಮೀರ್ ಖಾನ್ ಕಳೆದ ಫೆಬ್ರುವರಿಯಲ್ಲಿಯೂ ತಮ್ಮ ಮೊಬೈಲ್ ಫೋನ್ ಬಳಕೆ ನಿಲ್ಲಿಸುವುದಾಗಿ ಹೇಳಿಕೊಂಡಿದ್ದರು. ಸಿನಿಮಾ ಶೂಟಿಂಗ್‍ಗೆ ಪ್ರಾಮುಖ್ಯ ನೀಡುವ ನಿಟ್ಟಿನಲ್ಲಿ ಸ್ವಲ್ಪ ದಿನಗಳ ವರೆಗೆ ಮೊಬೈಲ್‍ ಬಳಕೆಯಿಂದ ದೂರ ಇರುವುದಾಗಿ ಹೇಳಿಕೊಂಡಿದ್ದರು. ಅದರಂತೆ ಸ್ವಲ್ಪ ದಿನ ಬಳಕೆ ನಿಲ್ಲಿಸಿದ್ದರು. ಆದರೆ ಇದೀಗ ಎಲ್ಲಿಯವರೆಗೆ ಈ ನಿರ್ಧಾರ ಎಂದು ಹೇಳಲಿಲ್ಲ.

ಅಂದಹಾಗೆ, ಆಮೀರ್​ ಖಾನ್​ ಅವರಿಗೆ ಕಳೆದ ಭಾನುವಾರ ನನಗೆ 56 ವರ್ಷ ತುಂಬಿದ್ದು, 57ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net