VIDEO: ನಿಮಗೆ ಧೈರ್ಯವಿದ್ರೆ ನನ್ನ ಎದೆಯ ಮೇಲೆ ಬಂದೂಕು ಇಡಿ ಎನ್ನುತ್ತಲೇ ನೃತ್ಯ ಮಾಡಿದ ಸಿಎಂ ಮಮತಾ!

mamata
Published on

ಕೋಲ್ಕತಾ: ಇಲ್ಲಿನ ಅಲಿಪುರ್​ದೌರ್​​​ನಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜಾನಪದ ಕಲಾವಿದರೊಂದಿಗೆ ನೃತ್ಯ ಮಾಡಿದ್ದಾರೆ. ಈ ವಿವಾಹ ಕಾರ್ಯಕ್ರಮದಲ್ಲಿ 510 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಈ ಸಂದರ್ಭದಲ್ಲಿ ರಾಜಕೀಯದ ಕುರಿತು ಮಾತನಾಡಿದ ಮಮತಾ, ನನ್ನ ದೇಹದಲ್ಲಿ ರಕ್ತ ಇರುವವರೆಗೂ ಬಂಗಾಳವನ್ನು ಇಬ್ಭಾಗವಾಗಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ. ಬಿಜೆಪಿಯ ಕೆಲವು ಮಂದಿ ಉತ್ತರ ಬಂಗಾಳವನ್ನು ಪ್ರತ್ಯೇಕ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ನಾವು ಒಗ್ಗಟ್ಟಾಗಿರುತ್ತೇವೆ. ನನ್ನ ದೇಹದಲ್ಲಿ ರಕ್ತ ಇರುವವರೆಗೂ ಬಂಗಾಳ ವಿಭಜಿಸಲು ಬಿಡುವುದಿಲ್ಲ. ಬಿಜೆಪಿಯವರು ವಿಭಜನೆಯ ರಾಜಕಾರಣ ಮಾಡುತ್ತಾರೆ. ನಾವು ವಿಭಜನೆಯಾಗುವುದಿಲ್ಲ, ನಾವು ಒಗ್ಗಟ್ಟಾಗಿ ಬೆಳೆಯುತ್ತೇವೆ ಎಂದು ಹೇಳಿದರು.

ಉತ್ತರ ಬಂಗಾಳವನ್ನು ವಿಭಜಿಸದಿದ್ದರೆ ನನ್ನನ್ನು ಕೊಲ್ಲುವುದಾಗಿ ಹೇಳುತ್ತಿದ್ದಾರೆ, ನಿಮಗೆ ಧೈರ್ಯವಿದ್ದರೇ ನನ್ನ ಎದೆಯ ಮೇಲೆ ಬಂದೂಕು ಇಡಿ, ನಾನು ಸಾಕಷ್ಟು ಬಂದೂಕುಗಳನ್ನು ನೋಡಿದ್ದೇನೆ ಎಂದು ತಿರುಗೇಟು ನಿಡಿದರು.

ಕಳೆದ 10 ವರ್ಷಗಳಲ್ಲಿ ಉತ್ತರ ಬಂಗಾಳದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ, ಈಗ ಉತ್ತರ ಬಂಗಾಳದ ಜನರು ದಕ್ಷಿಣ ಬಂಗಾಳಕ್ಕೆ ಹೋಗಬೇಕಾಗಿಲ್ಲ. ಬಿಜೆಪಿಯವರು ವಿಭಜನೆಯ ರಾಜಕಾರಣ ಮಾಡುತ್ತಾರೆ. ನಾವು ವಿಭಜನೆಯಾಗುವುದಿಲ್ಲ, ನಾವು ಒಗ್ಗಟ್ಟಾಗಿ ಬೆಳೆಯುತ್ತೇವೆ ಎಂದು ಹೇಳಿದರು.

ಮಮತಾ ಬ್ಯಾನರ್ಜಿಯ ನೃತ್ಯ ಇಲ್ಲಿದೆ ನೋಡಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net