

ಟೋಕಿಯೊ: ಗಾಯಕಿ ಸುನಿಧಿ ಚೌಹಾಣ್ ಅವರ ಕಂಠದಿಂದ ಬಂದ ನಟಿ ಮಾಧುರಿ ದೀಕ್ಷಿತ್ ಅವರು ನರ್ತಿಸಿರುವ ಸುಪ್ರಸಿದ್ಧ ಹಾಡು ಆಜಾ ನಾಚಲೆ ಸಿನಿಮಾದ ‘ಆಜಾ ನಾಚಲೆ ನಾಚಲೆ ಮೇರಿ ಯಾರ್ ನಾಚಲೆ’ ಒಲಿಂಪಿಕ್ಸ್ ಈಜುಕೊಳದಲ್ಲಿ ಸದ್ದು ಮಾಡಿದೆ.
ಇಸ್ರೇಲಿ ಈಜುಪಟುಗಳಾದ ಎಡೇನ್ ಬ್ಲೆಚಾರ್ ಹಾಗೂ ಶೆಲ್ಲಿ ಬೋಬ್ರಿಟ್ಸ್ಕಿ ಅವರು ಈ ಹಾಡಿಗೆ ತಕ್ಕಂತೆ ಈಜುಕೊಳದಲ್ಲಿ ಪ್ರದರ್ಶನ ನೀಡಿದ್ದು, ಇದು ಭಾರಿ ಮೆಚ್ಚುಗೆಗೆ ಪಾತ್ರವಾಯಿತು. ನಾಚಲೆ, ನಾಚಲೆ ಬ್ಯಾಕ್‌ಗ್ರೌಂಡ್ ಮ್ಯೂಸಿಕ್‌ಗೆ ಈ ಈಜುಪಟುಗಳು ಕೊಳದಲ್ಲಿ ನರ್ತಿಸುವ ಮೂಲಕ ಪ್ರದರ್ಶನ ನೀಡಿದ್ದಾರೆ. ಇದು ಮಾಧುರಿ ದೀಕ್ಷಿತ್ ಅಭಿಮಾನಿಗಳಿಗೆ ಮಾತ್ರವಲ್ಲದೇ ಟೋಕಿಯೊದಲ್ಲಿ ಬಾಲಿವುಡ್ ಹಾಡು ಕೇಳಿ ಭಾರತೀಯರೂ ಖುಷಿ ಪಟ್ಟಿದ್ದಾರೆ. ಆರ್ಟಿಸ್ಟಿಕ್ ಸ್ವಿಮ್ಮಿಂಗ್ ಡ್ಯೂಯಟ್ ಫ್ರೀ ಪೂರ್ವಭಾವಿ ಆವೃತ್ತಿಯಲ್ಲಿ ಈ ಪ್ರದರ್ಶನ ನೀಡಿದ್ದಾರೆ.
ಶೆಲ್ಲಿ ಹಾಗೂ ಈಡೆನ್ ಫೈನಲ್ ಪಂದ್ಯಕ್ಕೆ ಆಯ್ಕೆ ಆಗಲಿಲ್ಲ. ಆದರೆ ಭಾರತೀಯ ಸಿನಿಪ್ರಿಯರ ಮನಸ್ಸಂತೂ ಗೆದ್ದಿದ್ದಾರೆ. ಇದರ ವಿಡಿಯೋ ಇದೀಗ ವೈರಲ್ ಆಗಿದೆ.
ನೀವೂ ನೋಡಿ ವಿಡಿಯೋ: