13 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ- ಎಂಟು ಮಕ್ಕಳನ್ನು ಗರ್ಭಿಣಿ ಮಾಡಿದ ಶಿಕ್ಷಕ! ಜೀವಾವಧಿ ಶಿಕ್ಷೆ

teacher
Published on

ಇಂಡೋನೇಷ್ಯಾ: ಇತ್ತೀಚೆಗೆ ಶಿಕ್ಷಕರೇ ವಿದ್ಯಾರ್ಥಿಗಳ ಜತೆ ಕಾಮದಾಟದಲ್ಲಿ ಕಂಡುಬಂದಿರುವ ದೃಶ್ಯ ಕರ್ನಾಟಕದ ಶಾಲೆಗಳಿಂದಲೂ ವೈರಲ್‌ ಆಗಿದ್ದಿದೆ. ಆದರೆ ಶಿಕ್ಷಕನೊಬ್ಬ ತನ್ನ ಅಪ್ರಾಪ್ತ 13 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿ ಎಂಟು ಮಂದಿಯನ್ನು ಗರ್ಭಿಣಿ ಮಾಡಿರುವ ಭಯಾನಕ ಘಟನೆ ಇಂಡೋನೇಷಿಯಾದಲ್ಲಿ ನಡೆದಿದ್ದು, ಇದೀಗ ಈ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಬೋರ್ಡಿಂಗ್ ಶಾಲೆಯಲ್ಲಿರುವ 36 ವರ್ಷದ ಶಿಕ್ಷಕ ಹೆರ್ರಿ ವೈರಿಯಾವಾನ್‌ ಇಂಥದ್ದೊಂದು ಕೃತ್ಯ ಎಸಗಿದ್ದಾನೆ. ಪಾಲಕರು ಬೋರ್ಡಿಂಗ್‌ ಶಾಲೆಯಲ್ಲಿ ಕಲಿಯಲು ಮಕ್ಕಳನ್ನು ಬಿಟ್ಟು ಹೋಗಿದ್ದರೆ, ಈ ಪಾಪಿ ಶಿಕ್ಷಕ 13 ಮಂದಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಪೈಕಿ 8 ಮಂದಿ ಗರ್ಭಿಣಿಯಾಗಿದ್ದಾರೆ!

2016 ಮತ್ತು 2021 ರ ನಡುವೆ ಬೋರ್ಡಿಂಗ್ ಶಾಲೆಗಳಲ್ಲಿ ತನ್ನ ಆರೈಕೆಯಲ್ಲಿ 13 ಮತ್ತು 16 ರ ನಡುವಿನ ವಯಸ್ಸಿನ 13 ವಿದ್ಯಾರ್ಥಿನಿಯರ ಮೇಲೆ ಈತ ಅತ್ಯಾಚಾರವೆಸಗಿದ್ದಾನೆ ಈತ. ಇಷ್ಟಾದರೂ ಇದುವರೆಗೆ ಸಮಾಜಕ್ಕೆ ಅಂಜಿ ಯಾರೊಬ್ಬರೂ ಬಾಯಿ ಬಿಟ್ಟಿರಲಿಲ್ಲ. ತಮ್ಮ ಮಕ್ಕಳು ಗರ್ಭಿಣಿಯಾಗಿ ಮಗು ಹೆತ್ತರೂ ಪಾಲಕರು ಬಹಿರಂಗಗೊಳಿಸರಲಿಲ್ಲ. ಓರ್ವ ಬಾಲಕಿಯ ಪಾಲಕರು ದೂರು ದಾಖಲಿಸಿದ್ದಾಗ ವಿಷಯ ಬೆಳಕಿಗೆ ಬಂದಿದೆ. ಇದೀಗ ವಿಚಾರಣೆ ನಡೆದು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆದರೆ ಈತನಿಗೆ ಮರಣದಂಡನೆ ವಿಧಿಸಬೇಕೆಂದು ಪಾಲಕರು ಪಟ್ಟುಹಿಡಿದು ಪ್ರತಿಭಟನೆ ಶುರು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net