

ನನ್ನ ತಮ್ಮಂದಿರು ತಮಗೂ ಪಾಲು ಬೇಕು ಅನ್ನುತ್ತಿದ್ದಾರೆ. ನಾನು ನನ್ನ ಜಮೀನು ಕೊಡುವುದಿಲ್ಲ ಅಂದಿದ್ದೇನೆ. ಮುಂದೇನು ಮಾಡುವುದು? ತಮ್ಮಂದಿರು ಮುಂದೆ ಸಮಸ್ಯೆ ಮಾಡದಂತೆ ಏನು ಮಾಡುವುದು?
ಉತ್ತರ: ನಿಮ್ಮ ತಾಯಿಯ ಹೆಸರಿಗೆ ನೋಂದಾವಣೆ ಆದ ತಕ್ಷಣ , ಆ ಸ್ವತ್ತು ನಿಮ್ಮ ತಾಯಿಯ ಪ್ರತ್ಯೇಕ ಮಾಲೀಕತ್ವ ಮತ್ತು ಹಕ್ಕಿನ ಸ್ವತ್ತಾಗಿರುತ್ತದೆ, ಅವರಿಂದ ನಿಮಗೆ ನೋಂದಾಯಿತ ದಾನ ಪತ್ರ ಆಗಿದ್ದು, ಖಾತೆ , ಪಹಣಿ ಮತ್ತು ಎಲ್ಲ ರೆವೆನ್ಯೂ ದಾಖಲೆಗಳು ನಿಮ್ಮ ಹೆಸರಿಗೆ ಬಂದಿದ್ದರೆ ನೀವು ಚಿಂತೆ ಮಾಡಬೇಕಿಲ್ಲ. ನಿಮ್ಮ ಸಹೋದರರಿಗೆ ನೀವು ಪಾಲು ಕೊಡಬೇಕಾದ ಅವಶ್ಯಕತೆ ಇಲ್ಲ. ಅವರು ಈ ಜಮೀನಿನಲ್ಲಿ ಪಾಲು ಕೇಳಿ ದಾವೆ ಹಾಕಿದರೆ ಅದು ನಿಲ್ಲುವುದಿಲ್ಲ.