ಕೊನೆಗೂ ರಾಜೀನಾಮೆಗೆ ಸಿದ್ಧರಾದ ಲಂಕಾಧ್ಯಕ್ಷ: ಸರ್ಕಾರಿ ಆದೇಶ ಹೊರಡಿಸುತ್ತಲೇ ಒಲ್ಲದ ಮನಸ್ಸಿನಿಂದ ಸಮ್ಮತಿ!

raja
Published on

ಕೊಲಂಬೊ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ದಿನದಿಂದ ದಿನಕ್ಕೆ ಒಂದೊಂದು ರೂಪ ಪಡೆಯುತ್ತಲೇ ಸಾಗಿದೆ. ಇದೇ ಕಾರಣಕ್ಕೆ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ರಾಜೀನಾಮೆಗೆ ಒತ್ತಡ ಹೆಚ್ಚುತ್ತಲೇ ಇದೆ. ಇದು ತಿಳಿಯುತ್ತಲೇ ಗೋಪ್ಯ ಸ್ಥಳಕ್ಕೆ ಹೋಗಿ ಅಡಗಿ ಕುಳಿತಿದಿದ್ದಾರೆ ರಾಜಪಕ್ಸ. ಆದರೆ ಪ್ರತಿಭಟನಾಕಾರರ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಇದೀಗ ರಾಜೀನಾಮೆಗೆ ಸಿದ್ಧರಾಗಿದ್ದಾರೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಧಾನಿ ಕಾರ್ಯಾಲಯ ಹೇಳಿದೆ.

ಈ ಹಿಂದೆ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಪತ್ರಿಕಾಗೋಷ್ಠಿ ನಡೆಸಿ ರಾಜಪಕ್ಸ ಅವರು ಜುಲೈ 13 ರಂದು ರಾಜೀನಾಮೆ ನೀಡಲಿದ್ದಾರೆ ಎಂದಿದ್ದರು. ಆದರೆ ಶನಿವಾರ ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ಸಾವಿರಾರು ಪ್ರತಿಭಟನಾಕಾರರು ಮುತ್ತಿಗೆ ಹಾಕಿ, ರಾಜೀನಾಮೆಗೆ ಆಗ್ರಹಿದ ಹಿನ್ನೆಲೆಯಲ್ಲಿ ಇಂದು ಅಧಿಕೃತವಾಗಿ ರಾಜಪಕ್ಸ ರಾಜೀನಾಮೆ ನೀಡಿದ್ದಾರೆ.

ಆದರೆ ಇದಕ್ಕೂ ಸ್ವಲ್ವವೇ ಮುನ್ನ ರಾಜಪಕ್ಸ ಅವರು ರಾಜೀನಾಮೆ ಕೊಡಲು ತಯಾರು ಇರಲಿಲ್ಲ. ಗೋಪ್ಯವಾಗಿ ಅಡಗಿ ಕುಳಿತ ಸ್ಥಳದಿಂದಲೇ 37,000 ಮೆಟ್ರಿಕ್ ಟನ್ ಆಮದು ಅಡುಗೆ ಅನಿಲ ಸರಿಯಾಗಿ ವಿತರಣೆ ಮಾಡುವಂತೆ ಆದೇಶ ಹೊರಡಿಸಿದ್ದರು. ಈ ಮೂಲಕ ತಾವು ಅಧಿಕಾರದಲ್ಲಿ ಮುಂದುವರಿಯುವ ಸೂಚನೆ ನೀಡಿದ್ದರು. ಇದೀಗ ಆಮದು ಮಾಡಿರುವ ಆಹಾರ ಹಾಗೂ ಇತರ ವಸ್ತುಗಳ ವಿತರಣೆಗೆ ಮತ್ತೊಂದು ಆದೇಶ ಹೊರಡಿಸುವ ಸಾಧ್ಯತೆ ಇದೆ.

ರಾಜಪಕ್ಸ್ ರಾಜೀನಾಮೆಗೆ ಒಪ್ಪಿಕೊಂಡಿದ್ದು, ಸರ್ವ ಪಕ್ಷ ಸರ್ಕಾರಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ರಾನಿಲ್ ವಿಕ್ರಮಸಿಂಘೆ ಹೇಳಿದ್ದಾರೆ. ಆದರೆ ಪ್ರತಿಭಟನಕಾರರು ಈ ಕೂಡಲೇ ರಾಜೀನಾಮೆ ನೀಡಲು ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net