

ಸೂರತ್: ತಂದೆಯ ಸಂಬಂಧಿಯೊಬ್ಬನ ಜತೆಗೆ ಲೈಂಗಿಕ ಸಂಪರ್ಕ ಇಟ್ಟುಕೊಂಡ ಯುವತಿಯೊಬ್ಬಳು ಇದೀಗ ಬೇರೆ ಮದುವೆಯಾಗಲು ಸಾಧ್ಯವಾಗದೇ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಗುಜರಾತ್‍ನ ಸೂರತ್‍ನಲ್ಲಿ ನಡೆದಿದೆ.
ಯುವತಿಗೆ ಮದುವೆ ಫಿಕ್ಸ್ ಆಗುತ್ತಿದ್ದಂತೆಯೇ ಆಕೆಯ ಜತೆಗಿರುವ ಖಾಸಗಿ ವಿಡಿಯೋವನ್ನು ಬಹಿರಂಗ ಮಾಡಿರುವ ಈ ‘ಅಂಕಲ್’, ದೂರು ದಾಖಲಾಗುತ್ತಿದ್ದಂತೆಯೇ ಇದೀಗ ತಲೆಮರೆಸಿಕೊಂಡಿದ್ದಾನೆ.
ಸೌರಾಷ್ಟ್ರ ಮೂಲದ 25 ವರ್ಷದ ಯುವತಿ ಸೂರತ್‍ನ ಪೂನಾದಲ್ಲಿ ವಾಸವಾಗಿದ್ದಾಳೆ. ಸೀರೆಗಳಿಗೆ ಕುಸುರಿ ಮತ್ತು ಲೇಸ್ ವರ್ಕ್ ಮಾಡುವ ಮೂಲಕ ಜೀವನ ಸಾಗಿಸುತ್ತಿರುವ ಈ ಯುವತಿ ಅದ್ಯಾವುದೋ ಘಳಿಗೆಯಲ್ಲಿ ಚಿಕ್ಕಪ್ಪನ ಜಾಲಕ್ಕೆ ಬಿದ್ದಿದ್ದಾಳೆ. 30 ವರ್ಷದ ತನ್ನ ಚಿಕ್ಕಪ್ಪ ಕರಣ್‌ನ ಕಣ್ಣು ಈಕೆಯ ಮೇಲೆ ಬೀಳುತ್ತಿದ್ದಂತೆಯೇ ತನ್ನ ಮಾತಿನ ಜಾಲಕ್ಕೆ ಈಕೆಯನ್ನು ಬೀಳಿಸಿಕೊಂಡಿದ್ದಾನೆ.
ಈತ ಪ್ರತಿದಿನ ಯುವತಿಯ ಮನೆಗೆ ಭೇಟಿ ನೀಡುತ್ತಿದ್ದನು. ತಂದೆಯ ಸಂಬಂಧಿಯಾಗಿದ್ದ ಈತನನ್ನು ಯುವತಿ ಅಂಕಲ್ ಎಂದೇ ಕರೆಯುತ್ತಿದ್ದಳು. ಹೀಗೆ ಕರೆಯಬೇಡ ಎಂದು ಕರಣ್ ಆಕೆಗೆ ಹೇಳುತ್ತಿದ್ದ. ಕಳೆದ ವರ್ಷ ಕರಣ್ ಯುವತಿಗೆ ಪ್ರಪೋಸ್ ಮಾಡಿದ್ದ. ಮೊದಲು ನಿರಾಕರಿಸಿದ ಯುವತಿ ನಂತರ ಆತನ ಬಲೆಗೆ ಬಿದ್ದಿದ್ದಾಳೆ.
ಇಬ್ಬೂ ಕೆಲ ತಿಂಗಳು ದೈಹಿಕ ಸಂಪರ್ಕವನ್ನೂ ಹೊಂದಿದ್ದಾರೆ. ಅವೆಲ್ಲವನ್ನೂ ಆತ ವಿಡಿಯೋ ಮಾಡಿಟ್ಟುಕೊಂಡಿದ್ದ. ಮೂರು ತಿಂಗಳ ಹಿಂದೆ ಯುವತಿಯ ಕುಟುಂಬದವರು ಆಕೆಗೆ ಮದುವೆ ಮಾಡಲು ಹುಡುಗನನ್ನು ಹುಡುಕುತ್ತಿದ್ದರು. ಆಗ ಕರಣ್ ಮದುವೆಗೆ ಒಪ್ಪದಂತೆ ಮೊದಲು ಹೇಳಿದ್ದಾನೆ. ಆದರೆ ತಮ್ಮ ಸಂಬಂಧದ ಬಗ್ಗೆ ಮನೆಯವರಿಗೆ ತಿಳಿಸುವುದು ಕಷ್ಟ ಎಂದು ಯುವತಿ ಹೇಳಿದ್ದಾಳೆ.
ನಂತರ ಕರಣ್, ನೀವು ಮನೆಯವರ ಇಷ್ಟದಂತೆ ಮದುವೆಯಾಗು. ಆದರೆ ನನ್ನ ಜತೆ ಮಾತ್ರ ದೈಹಿಕ ಸಂಬಂಧ ಮುಂದುವರೆಸಬೇಕು ಎಂದಿದ್ದಾನೆ. ಯುವತಿ ಅದನ್ನು ಒಪ್ಪಲಿಲ್ಲ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಯುವತಿ ಆತನ ಜತೆ ಮಾತನಾಡುವುದನ್ನು ನಿಲ್ಲಿಸಿದ್ದಾಳೆ.
ಇದರಿಂದ ಸಿಟ್ಟುಗೊಂಡ ಅಂಕಲ್. ಆಕೆಯ ತಂದೆ ಸೇರಿದಂತೆ ಕುಟುಂಬಸ್ಥರಿಗೆಲ್ಲ ವಿಡಿಯೋ ಕಳಿಸಿಬಿಟ್ಟಿದ್ದಾನೆ. ಇದರಿಂದ ಯುವತಿ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದು, ಸದ್ಯ ಆತ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.