ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯಲ್ಲಿವೆ ಉದ್ಯೋಗಾವಕಾಶ- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ...

job
Published on

ಉತ್ತರ ಕನ್ನಡದ ಕಾರವಾರ ಜಿಲ್ಲಾ ಪಂಚಾಯಿತಿ ವತಿಯಿಂದ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ (ಕೆಎಸ್​ಆರ್​ಎಲ್​ಪಿಎಸ್) ಅಡಿಯಲ್ಲಿ ಅನುಷ್ಠಾನವಾಗುತ್ತಿರುವ ಎನ್​ಆರ್​ಎಲ್​ಎಂ ಯೋಜನೆಯಡಿ ಜಿಲ್ಲೆ ಮತ್ತು ತಾಲೂಕು ಅಭಿಯಾನ ಘಟಕಗಳಲ್ಲಿ ಅನುಮೋದನೆಗೊಂಡು ಖಾಲಿ ಇರುವ ಸೂಚಿತ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸಿದ್ಧಾಪುರ, ಮುಂಡುಗೋಡು, ಹಳಿಯಾಳ, ಹೊನ್ನಾವರ,  ಕುಮಟಾ, ಭಟ್ಕಳ, ಕಾರವಾರಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು.

ಒಟ್ಟು ಹುದ್ದೆಗಳು: 9

ಹುದ್ದೆ ವಿವರ

* ತಾಲೂಕು ಪ್ರೋಗ್ರಾಮ್ ಮ್ಯಾನೇಜರ್ - 6

ಪೂರ್ಣಾವಧಿಯಲ್ಲಿ ಸ್ನಾತಕೋತ್ತರ ಪದವಿ ಅಥವಾ ಸ್ನಾತಕೋತ್ತರ ಡಿಪ್ಲೊಮಾ ಮಾಡಿರುವ, ಕಂಪ್ಯೂಟರ್ ಜ್ಞಾನ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕನಿಷ್ಠ 5 ವರ್ಷದ ವೃತ್ತಿ ಅನುಭವ ಕೇಳಲಾಗಿದೆ. ಕನಿಷ್ಠ 18, ಗರಿಷ್ಠ 45 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಮಾಸಿಕ 28,000 ರೂ. ವೇತನ ನೀಡಲಾಗುವುದು.

* ಕ್ಲಸ್ಟರ್ ಸೂಪರ್​ವೈಸರ್ - 2

ಪೂರ್ಣಕಾಲಿಕ ಪದವೀಧರರಾಗಿದ್ದು, ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು. ಕಂಪ್ಯೂಟರ್ ಜ್ಞಾನ ಕೂಡ ಅವಶ್ಯ. ಕನಿಷ್ಠ 2 ವರ್ಷದ ವೃತ್ತಿ ಅನುಭವ ಕೇಳಲಾಗಿದ್ದು, ಗರಿಷ್ಠ 45 ವರ್ಷ ವಯೋಮಿತಿ ಇದೆ. ಮಾಸಿಕ 18,000 ರೂ. ವೇತನ ನಿಗದಿಪಡಿಸಲಾಗಿದೆ.

* ಡಿಎಂಐಎಸ್ ಅಸಿಸ್ಟೆಂಟ್ (ಜಿಲ್ಲಾ ಮಟ್ಟ) - 1

ಪೂರ್ಣವಧಿಯಲ್ಲಿ ಪದವಿ ಪಡೆದಿದ್ದು, ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು. ಕಂಪ್ಯೂಟರ್ ಜ್ಞಾನ ಅವಶ್ಯ. ಕನಿಷ್ಠ 3 ವರ್ಷದ ವೃತ್ತಿ ಅನುಭವ ಕೇಳಲಾಗಿದ್ದು, ಗರಿಷ್ಠ 45 ವರ್ಷ ವಯೋಮಿತಿ ನಿಗಿದಿಪಡಿಸಲಾಗಿದೆ. ಮಾಸಿಕ 20,500 ರೂ. ವೇತನ ಇದೆ.

ಸೂಚನೆ: ಆಸಕ್ತ ಅಭ್ಯರ್ಥಿಗಳು ವೆಬ್​ಸೈಟ್​ನಲ್ಲಿ ತಮ್ಮ ಮಾಹಿತಿಯನ್ನು ಭರ್ತಿ ಮಾಡಿ ಆನ್​ಲೈನ್​ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ ಆಧರಿಸಿ ಶಾರ್ಟ್​ಲಿಸ್ಟ್ ಮಾಡಿ 1:3ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 29.12.2021

ಅಧಿಸೂಚನೆಗೆ: https://bit.ly/3pppTMP

ಮಾಹಿತಿಗೆ: http://zpkarwar.kar.nic.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net