₹26 ಸಾವಿರ ಮಾಸ್ಕ್​ ಧರಿಸಿ ಸ್ಪೆಷಲ್​ ಮೆಸೇಜ್​ ನೀಡಿದ್ರು ಕರೀನಾ... ಮಾಸ್ಕ್​ ಸೋಲ್ಡ್​ ಔಟ್​!

kareena
Published on

ಮುಂಬೈ: ಈಗ ಕರೊನಾ ಯಾವ ಕ್ಷೇತ್ರವನ್ನೂ, ಎಂಥ ದಿಗ್ಗಜರನ್ನು, ಎಂತೆಂಥ ಸೆಲೆಬ್ರಿಟಿಗಳನ್ನೂ ಬಿಡುತ್ತಿಲ್ಲ. ಸಿನಿಮಾ ರಂಗದಲ್ಲಿಯೂ ಕೂಡ ಅನೇಕ ಮಂದಿ ನಟ- ನಟಿಯರು ಸೋಂಕಿಗೆ ಒಳಗಾಗಿದ್ದಾರೆ, ಕೆಲವರು ಚಿಕಿತ್ಸೆ ಮುಂದುವರೆಸಿದ್ದಾರೆ.

ಈ ನಡುವೆ ಬಾಲಿವುಡ್​ ತಾರೆ ಕರೀನಾ ಕಪೂರ್​ 26 ಸಾವಿರ ರೂಪಾಯಿಯ ಮಾಸ್ಕ್​ ಧರಿಸಿ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ಸುಮಾರು 26 ಸಾವಿರ ರೂಪಾಯಿ ಬೆಲೆಯ ಮಾಸ್ಕ್​ ಇದಾಗಿದ್ದು, ಇದನ್ನು ಧರಿಸಿ ಇನ್​ಸ್ಟಾಗ್ರಾಂನಲ್ಲಿ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.

ನಾನು ಮಾಸ್ಕ್​ ಧರಿಸಿರುವುದು ಪ್ರಚಾರಕ್ಕೆ ಅಲ್ಲ. ಅದೇ ರೀತಿ ಮಾಸ್ಕ್​ ಕೂಡ ಪ್ರಚಾರಕ್ಕಾಗಿ ಧರಿಸಬೇಡಿ. ಬದಲಿಗೆ ಸುಮ್ನೆ ಮಾಸ್ಕ್ ಹಾಕಿಕೊಳ್ಳಿ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಮೂಲಕ ಎಲ್ಲರಿಗೂ ಮಾಸ್ಕ್​ ಧರಿಸುವಂತೆ ಸಂದೇಶ ನೀಡಿದ್ದಾರೆ. ಸಿನಿ ಪ್ರಿಯರು ತಮ್ಮ ಅಭಿಮಾನಿಗಳನ್ನೇ ಫಾಲೋ ಮಾಡುವುದು ಹೆಚ್ಚು. ಆದ್ದರಿಂದ ಈ ಮೂಲಕ ತಮ್ಮ ನೆಚ್ಚಿನ ತಾರೆ ಇಂಥದ್ದೊಂದು ಸಂದೇಶ ನೀಡಿದ್ದರಿಂದ ತಾವೂ ಮಾಸ್ಕ್​ ಧರಿಸಲು ಮುಂದಾಗಬಹುದು ಎನ್ನುವ ಕಾರಣಕ್ಕೆ ಕರೀನಾ ಈ ಪೋಸ್ಟ್​ ಶೇರ್​ ಮಾಡಿಕೊಂಡಿದ್ದಾರೆ.

ಕರೀನಾ ಮಾತ್ರವಲ್ಲದೇ ದೀಪಿಕಾ ಪಡುಕೋಣೆ, ರಣಬೀರ್ ಕಪೂರ್ ಮುಂತಾದ ಹಲವಾರು ಪ್ರಸಿದ್ಧ ವ್ಯಕ್ತಿಗಳು ಈ ದುಬಾರಿ ಬೆಲೆಯ ಮಾಸ್ಕ್ ಬಳಸುತ್ತಿದ್ದಾರೆ. ಈ ಮಾಸ್ಕ್ ಮರುಬಳಕೆ ಮಾಡಬಹುದಾಗಿದೆ. ಇದರ ವಿಶೇಷತೆ ಎಂದರೆ ಇದನ್ನು ಇಡಲು ರೇಷ್ಮೆ ಬ್ಯಾಗ್ ಕೂಡ ಇದೆ. ಕರೀನಾ ಕಪೂರ್​ ತಮ್ಮ ಫೋಟೋ ಶೇರ್​ ಮಾಡಿದ್ದು, ಅಭಿಮಾನಿಗಳ ಮೇಲೆ ಮಾಸ್ಕ್​ ಧರಿಸಲು ಎಷ್ಟು ಪ್ರೇರಣೆ ನೀಡಿತೋ ಗೊತ್ತಿಲ್ಲ, ಒಟ್ಟಿನಲ್ಲಿ ಇಷ್ಟು ದುಬಾರಿಯ ಮಾಸ್ಕ್​ ಮಾತ್ರ ಸಂಪೂರ್ಣ ಸೋಲ್ಡ್​ ಔಟ್​ ಆಗಿದೆಯಂತೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net