ಮದುವೆಗೆ ನಾಲ್ಕು ದಿನವಿರುವಾಗಲೇ ಕಲಬುರಗಿ ಕಾನ್‌ಸ್ಟೆಬಲ್‌ ನಿಗೂಢ ಸಾವು: ರೈಲು ಹಳಿಯ ಮೇಲೆ ಶವ ಪತ್ತೆ

constable
Published on

ಕಲಬುರಗಿ: ಮದುವೆಗೆ ನಾಲ್ಕು ದಿನವಿರುವಾಗಲೇ ಕಾನ್ಸ್‌ಟೆಬಲ್‌ ಒಬ್ಬರು ನಿಗೂಢವಾಗಿ ಮೃತಪಟ್ಟಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಪೊಲೀಸ್ ಕಾನಸ್ಟೇಬಲ್ ಶ್ರೀನಾಥ್ (25) ಅವರ ಮೃತದೇಹ ಕಲಬುರಗಿ ತಾಲೂಕಿನ ಸಾವಳಗಿ ಬಳಿ ರೈಲು ಹಳಿ ಮೇಲೆ ಪತ್ತೆಯಾಗಿದೆ. ಅಫಜಲಪುರ ತಾಲೂಕಿನ ಮದರಾ ಕೆ ಗ್ರಾಮದ ನಿವಾಸಿಯಾಗಿರುವ ಶ್ರೀನಾಥ್‌ ಅವರ ವಿವಾಹ ಬರುವ ಡಿಸೆಂಬರ್‌ 1ರಂದು ಇತ್ತು.

ಇವರು ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಸಾವಿಗೆ ಕಾರಣವಿನ್ನೂ ತಿಳಿದಿಲ್ಲ. ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ (ದಿಗ್ವಿಜಯ ನ್ಯೂಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net