

ಉನ್ನಾವೊ: ಉತ್ತರ ಪ್ರದೇಶದ ಉನ್ನಾವೊದ ಸದರ್ ಕೊಟ್ವಾಲಿ ಪ್ರದೇಶದ ರೈಲು ಹಳಿಯ ಮೇಲೆ ಪತ್ರಕರ್ತನ ಶವವೊಂದು ನಿಗೂಢವಾಗಿ ಪತ್ತೆಯಾಗಿದೆ.
ಸ್ಥಳೀಯ ಹಿಂದಿ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಸೂರಜ್ ಪಾಂಡೆ ಎಂಬ ಯುವಕನ ಶವ ಸಿಕ್ಕಿದೆ. ಇದು ಕೊಲೆಯಾಗಿದ್ದು, ಇದರ ಹಿಂದೆ ಸಬ್ ಇನ್ಸ್‌ಪೆಕ್ಟರ್ ಸುನೀತಾ ಚೌರಾಸಿಯಾ ಹಾಗೂ ಕಾನ್‌ಸ್ಟೆಬಲ್ ಅಮರ್ ಸಿಂಗ್ ಕೈವಾಡಿ ಇರುವುದಾಗಿ ಗುಮಾನಿ ಬಂದಿದ್ದು ಇವರ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬೆಳಗ್ಗೆ ಕಸ ಎಸೆದ್ರು- ಮತ್ತೆ ಬಂದು ಹೆಕ್ಕಿದ್ರು!
ತಮ್ಮ ಮಗನನ್ನು ಕೊಲೆ ಮಾಡಲಾಗಿದ್ದು ನಂತರ ನಂತರ ರೈಲ್ವೆ ಹಳಿ ಮೇಲೆ ಶವವನ್ನು ಎಸೆಯಲಾಗಿದೆ ಎಂದು ಅವರ ಪಾಲಕರು ಆರೋಪಿಸಿದ್ದರು.
ಇದರ ತನಿಖೆ ಕೈಗೊಂಡ ಪೊಲೀಸರಿಗೆ ಸುನೀತಾ, ಅಮರ್ ಸೇರಿದಂತೆ ಇನ್ನೂ ಕೆಲವರ ಕೈವಾಡ ಇರುವುದು ತಿಳಿಸಿದೆ. ಸೂರಜ್ ಮತ್ತು ಪೊಲೀಸ್ ಅಧಿಕಾರಿ ಸುನೀತಾ ಇಬ್ಬರು ಸ್ನೇಹಿತರಾಗಿದ್ದರು. ನವೆಂಬರ್ 11 ರಂದು ಕಾನ್‌ಸ್ಟೆಬಲ್ ಅಮರ್ ಸಿಂಗ್ ಫೋನ್ ಕರೆ ಮಾಡಿ ಬೆದರಿಕೆ ಹಾಕಿದ್ದರು ಎಂದು ಪತ್ರಕರ್ತನ ತಾಯಿ ಲಕ್ಷ್ಮಿ ಪಾಂಡೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ ಸೂರಜ್, ಫೋನ್ ಕರೆಯೊಂದು ಬಂದ ನಂತರ ಮನೆಯಿಂದ ತೆರಳಿದ್ದ. ನಂತರ ಶವವಾಗಿ ಪತ್ತೆಯಾಗಿದ್ದಾನೆ ಎಂದು ಅವರು ಹೇಳಿದ್ದಾರೆ.