

ಸೆಂಟ್ರಲ್ ರೈಲ್ವೆ ವಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕ್ರೀಡಾಪಟುಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. 2021-22ನೇ ಸಾಲಿನ ನೇಮಕಾತಿ ಇದಾಗಿದ್ದು, ಹುದ್ದೆಗಳಲ್ಲಿ ಜಾತಿ ಆಧಾರಿತ ಮೀಸಲಾತಿ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಒಟ್ಟು ಹುದ್ದೆಗಳು: 21
ಯಾವ ಕ್ರೀಡಾಪಟುಗಳಿಗೆ ಅವಕಾಶ
- ವೇತನ ಶ್ರೇಣಿ 4/5 ಅಡಿ ನೇಮಕ ಮಾಡಿಕೊಳ್ಳಲಾಗುವ ಹುದ್ದೆಗಳು - 3
* ಬಾಸ್ಕೆಟ್ಬಾಲ್ (ಮಹಿಳಾ)- 1
* ಬಾಕ್ಸಿಂಗ್ (ಪುರುಷ) - 1
* ಹಾಕಿ (ಪುರುಷ) - 1
- ವೇತನ ಶ್ರೇಣಿ 2/3ರ ಅಡಿಯಲ್ಲಿನ ಹುದ್ದೆಗಳು - 18
* ವಾಟರ್ ಪೊಲೊ (ಪುರುಷ) - 1
* ಅಥ್ಲೆಟಿಕ್ಸ್ (ಮಹಿಳಾ) - 1
* ಬಾಡ್ಮಿಂಟನ್ (ಪುರುಷ) - 1
* ಬಾಸ್ಕೆಟ್ಬಾಲ್ -1
* ಬಾಕ್ಸಿಂಗ್ - 1
* ಕ್ರಿಕೆಟ್ - 3
* ಕ್ರಿಕೆಟ್ (ಮಹಿಳಾ) - 2
* ಹಾಕಿ - 1
* ಕಬಡ್ಡಿ - 1
* ಕಬಡ್ಡಿ (ಮಹಿಳಾ) - 2
* ವಾಲಿಬಾಲ್ (ಮಹಿಳಾ) - 1
* ವೈಟ್ ಲಿಫ್ಟಿಂಗ್ (ಮಹಿಳಾ) - 1
* ವ್ರಿಸ್ಲಿಂಗ್ (ಜಿಆರ್-1, ಎಫ್ಎಸ್-1) - 2
ಶೈಕ್ಷಣಿಕ ಅರ್ಹತೆ: ವೇತನ ಶ್ರೇಣಿ 2-3ರ ಹುದ್ದೆಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶಿಕ್ಷಣ, ವೇತನ ಶ್ರೇಣಿ 4-5ರ ಹುದ್ದೆಗೆ ಯಾವುದೇ ಪದವಿ ಪಡೆದಿರಬೇಕು. ಜತೆ ಕ್ರೀಡಾ ಸಾಧನೆಗಳು ಅವಶ್ಯ.
ವಯೋಮಿತಿ: 1.1.2022ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಮಾಜಿ ಸೈನಿಕ, ಅಂಗವಿಕಲ, ಮಹಿಳಾ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 250 ರೂ. ನಿಗದಿಪಡಿಸಿದ್ದು, ಇತರ ಅಭ್ಯರ್ಥಿಗಳಿಗೆ 500 ರೂ. ಅರ್ಜಿಶುಲ್ಕ ನಿಗದಿಪಡಿಸಲಾಗಿದೆ.
ಯಾವ ಸಾಧನೆ ಪರಿಗಣನೆ?
ಒಲಿಂಪಿಕ್ ಗೇಮ್ ವಿಶ್ವ ಕಪ್, ವಿಶ್ವ ಚಾಂಪಿಯನ್ಷಿಪ್, ಏಷಿಯನ್ ಗೇಮ್್ಸ, ಕಾಮನ್ವೆಲ್ತ್ ಗೇಮ್್ಸ, ಯೂಥ್ ಒಲಿಂಪಿಕ್ಸ್, ಡೇವಿಸ್ ಕಪ್, ಚಾಂಪಿಯನ್ಸ್ ಟ್ರೋಫಿ, ಥಾಮಸ್/ಊಬರ್ ಕಪ್, ಕಾಮನ್ವೆಲ್ತ್ ಚಾಂಪಿಯನ್ಷಿಪ್, ಏಷಿಯನ್ ಚಾಂಪಿಯನ್ಷಿಪ್/ ಏಷಿಯಾ ಕಪ್, ಸೌತ್ ಏಷಿಯಾ ಫೆಡರೇಷನ್ ಗೇಮ್್ಸ, ಯುಎಸ್ಐಸಿ (ವರ್ಲ್ಡ್ ರೈಲ್ವೆ) ಚಾಂಪಿಯನ್ಷಿಪ್, ವರ್ಲ್ಡ್ ಯನಿವರ್ಸಿಟಿ ಗೇಮ್ಸ್ಗಳಲ್ಲಿ ದೇಶವನ್ನು ಪ್ರತಿನಿಧಿಸಿರಬೇಕು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಸಾಧನೆ ಮಾಡಿರಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನ: 27.12.2021
ಅಧಿಸೂಚನೆಗೆ: https://bit.ly/31UKf7a
ಮಾಹಿತಿಗೆ: http://www.rrccr.com