

ಪ್ರಸಾರ ಭಾರತಿಯಲ್ಲಿ ಕೆಲವೊಂದು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಸಂಪನ್ಮೂಲ ವ್ಯಕ್ತಿ, ವಿಡಿಯೋ ಸಹಾಯಕ ಸೇರಿ ವಿವಿಧ ಹುದ್ದೆಗಳು ಇವಾಗಿದೆ.
ಹುದ್ದೆಯ ಮಾಹಿತಿ:
ಸಂಪನ್ಮೂಲ ವ್ಯಕ್ತಿ (Resource Person)
ವೀಡಿಯೊ ಸಹಾಯಕ (Video Assistant)
ಪೋಸ್ಟ್ ಪ್ರೊಡಕ್ಷನ್ ಸಹಾಯಕ (Post Production Assistant)
ಸಹಾಯಕ ಮೇಕಪ್ ಬ್ಯೂಟಿಷಿಯನ್/ಕೇಶ ವಿನ್ಯಾಸಕರು (Makeup Assistant Beautician/Hair Dresser)
ಸೆಟ್ ಸಹಾಯಕ/ಬಡಗಿ (Set Assistant/Carpenter)
ಜನರಲ್ ಅಸಿಸ್ಟೆಂಟ್ (General Assistant)
ಕೊನೆಯ ದಿನ: ಜನವರಿ 31
ವಯೋಮಿತಿ: ಸಂಪನ್ಮೂಲ ವ್ಯಕ್ತಿ, ವಿಡಿಯೋ ಸಹಾಯಕ, ಜನರಲ್ ಅಸಿಸ್ಟೆಂಟ್ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 21 ರಿಂದ 40 ವರ್ಷದೊಳಗಿರಬೇಕು.
ವಿದ್ಯಾರ್ಹತೆ
ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಪದವಿ ಪಡೆದಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಪತ್ರಿಕೋದ್ಯಮ ಮತ್ತು ಸಮೂಹ/ ಟಿವಿ ಮತ್ತು ರೇಡಿಯೊದಲ್ಲಿ ಪದವಿ/ಪಿಜಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
ವಿಡಿಯೋ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10+2, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿನಿಮಾಟೋಗ್ರಫಿ/ವೀಡಿಯೋಗ್ರಫಿಯಲ್ಲಿ ಡಿಪ್ಲೊಮಾ/ಪದವಿ ಪಡೆದಿರಬೇಕು.
ಪೋಸ್ಟ್ ಪ್ರೊಡಕ್ಷನ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10+2; ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಚಲನಚಿತ್ರ ಮತ್ತು ವೀಡಿಯೊ ಸಂಪಾದನೆಯಲ್ಲಿ ಪದವಿ ಪದವಿ/ ಪಿಜಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
ಸಹಾಯಕ ಮೇಕಪ್ ಬ್ಯೂಟಿಷಿಯನ್/ಕೇಶ ವಿನ್ಯಾಸಕರು ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಸಂಸ್ಥೆಯಿಂದ ಪಿಯುಸಿ ಮಾಡಿರಬೇಕು. ಮೇಕಪ್ ವಿಷಯದಲ್ಲಿ ಡಿಪ್ಲೋಮಾ ಮತ್ತು ವೃತ್ತಿಪರ ಪಾರ್ಲರ್ ನಲ್ಲಿ 2 ವರ್ಷಗಳ ಅನುಭವ ಇರಬೇಕು.
ಸೆಟ್ ಸಹಾಯಕ/ಬಡಗಿ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಸಂಸ್ಥೆಯಿಂದ ಪಿಯುಸಿ ಮಾಡಿರಬೇಕು.
ಜನರಲ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಪೂರ್ಣಗೊಳಿಸಿರಬೇಕು.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ: