

ಪರಮಾಣು ಶಕ್ತಿ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಹೈದರಾಬಾದ್ನಲ್ಲಿರುವ ಪ್ರಾದೇಶಿಕ ಕಚೇರಿಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಅಪ್ರೆಂಟೀಸ್ ತರಬೇತಿ ನೀಡಲು ಸಿದ್ಧತೆ ನಡೆಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.
ಒಟ್ಟು ಸ್ಥಾನಗಳು: 150
ಇಸಿಐಎಲ್ನ ಇಸಿಇ , ಸಿಎಸ್ಇ, ಎಂಇಸಿಎಚ್, ಇಇಇ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ಈ ತರಬೇತಿಯು 1 ವರ್ಷದ ಅವಧಿಗೆ ಒಳಪಟ್ಟಿದ್ದು, 2022ರ ಫೆಬ್ರವರಿ 1 ರಿಂದ ತರಬೇತಿ ನಡೆಯಲಿದೆ. ಸರ್ಕಾರದ ನಿಯಮದನ್ವಯ ಸ್ಥಾನಗಳಲ್ಲಿ ಮೀಸಲಾಗಿ ಇರುತ್ತದೆ. ಅಭ್ಯರ್ಥಿಗಳಿಗೆ ಇಸಿಐಎಲ್ನೊಂದಿಗೆ ತರಬೇತಿಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಬೇಕಿದ್ದು, ಒಂದುವೇಳೆ ಅಭ್ಯರ್ಥಿಗಳು ತರಬೇತಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದರೆ, ಆ ಅಭ್ಯರ್ಥಿಗಳು ತರಬೇತಿ ಕೊನೆಯವರೆಗೆ ಪಡೆದ ಸ್ಟೈಪೆಂಡ್ ಹಾಗೂ ಸಂಸ್ಥೆ ತನಗಾಗಿ ಮಾಡಿದ ಖರ್ಚಿನ ಮೊತ್ತವನ್ನು ಪಾವತಿಸಬೇಕಿರುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸ್ಥಾನಗಳ ವಿವರ
* ಗ್ರಾಜುಯೇಟ್ ಇಂಜಿನಿಯರ್ ಅಪ್ರೆಂಟೀಸ್ (ಜಿಇಎ) - 145
* ಟೆಕ್ನೀಷಿಯನ್ (ಡಿಪ್ಲೊಮಾ) ಅಪ್ರೆಂಟೀಸ್ (ಟಿಎ) - 5
ಶೈಕ್ಷಣಿಕ ಅರ್ಹತೆ: 2019ರ ಏಪ್ರಿಲ್ 1ರ ಒಳಗೆ ನಮೂದಿಸಿರುವ ವಿಭಾಗಗಳ ವಿಷಯದಲ್ಲಿ 3 ವರ್ಷದ ಡಿಪ್ಲೊಮಾ, 4 ವರ್ಷದ ಬಿಇ, ಬಿ.ಟೆಕ್ ಪದವಿ ಪಡೆದಿರಬೇಕು.
ವಯೋಮಿತಿ: 31.1.2022ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ. ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ನಿಯಮದನ್ವಯ 3 ರಿಂದ 10 ವರ್ಷ ವಯೋ ಸಡಿಲಿಕೆ ಇದೆ.
ಗೌರವಧನ: ಗ್ರಾಜುಯೇಟ್ ಇಂಜಿನಿಯರ್ ಅಪ್ರೆಂಟೀಸ್ಗೆ ಮಾಸಿಕ 9,000 ರೂ., ಡಿಪ್ಲೊಮಾ ಅಪ್ರೆಂಟೀಸ್ಗೆ ಮಾಸಿಕ 8,000 ರೂ. ಗೌರವ ಧನ (ಸ್ಟೈಪೆಂಡ್) ನೀಡಲಾಗುವುದು.
ಸೂಚನೆ: ಆಸಕ್ತ ಅಭ್ಯರ್ಥಿಗಳು ನ್ಯಾಟ್ ಪೋರ್ಟ್ಲ್ http://-www.mhrdnats.gov.in
ನಲ್ಲಿ ನೋಂದಾಯಿತರಾಗಿ, ಅಲ್ಲಿಂದಲೇ ಆನ್ಲೈನ್ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ಮೆರಿಟ್ ಆಧರಿಸಿ ಆಯ್ಕೆ ಮಾಡಲಾಗುವುದು. ಈಗಾಗಲೇ ಅಪ್ರೆಂಟೀಸ್ ತರಬೇತಿ ಪಡೆದಿರುವ ಅಥವಾ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ. ಅಭ್ಯರ್ಥಿಗಳು ತರಬೇತಿಗೆ ದಾಖಲಾಗುವ ಸಂದರ್ಭದಲ್ಲಿ ಸಿವಿಲ್ ಅಸಿಸ್ಟೆಂಟ್ ಸರ್ಜನ್ನಿಂದ ಪಡೆದ ದೈಹಿಕ ದೃಢತೆ ಪ್ರಮಾಣಪತ್ರ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನ: 18.1.2022
ವೆಬ್ಸೈಟ್ನಲ್ಲಿ ಆಯ್ಕೆ ಪಟ್ಟಿ ಪ್ರಕಟ: 20.1.2022
ಅಧಿಸೂಚನೆಗೆ: https://bit.ly/3tlqHVm
ಮಾಹಿತಿಗೆ: http://careers.ecil.co.in