

ಪ್ಲಾಸ್ಮಾ ರಿಸರ್ಚ್ ಇನ್ಸ್ಟಿಟ್ಯೂಟ್ ಪರಮಾಣು ಶಕ್ತಿ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ಲಾಸ್ಮಾ ಫಿಜಿಕ್ಸ್, ಮ್ಯಾಗ್ನೆಟಿಕ್ ಕನ್ಫೈನ್ವೆುಂಟ್ ಫ್ಯೂಷನ್, ಇಂಡಸ್ಟ್ರಿಯಲ್ ಆಂಡ್ ಸೊಸೈಟಲ್ ಅಪ್ಲಿಕೇಷನ್ ಸಂಶೋಧನೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಸಂಸ್ಥೆಯ ವಿವಿಧ ವಿಭಾಗದಲ್ಲಿರುವ ಪ್ರಾಜೆಕ್ಟ್ ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಒಟ್ಟು ಸ್ಥಾನಗಳು: 81
ಗುಜರಾತ್ನ ಗಾಂಧಿನಗರದಲ್ಲಿರುವ ಪ್ಲಾಸ್ಮಾ ಸಂಶೋಧನಾ ಕೇಂದ್ರ ಅಥವಾ ಲ್ಯಾಬೊರೇಟರಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆನ್ಲೈನ್ ಅರ್ಜಿಗಳಿಗೆ ಮಾತ್ರ ಅವಕಾಶ ಎಂದು ತಿಳಿಸಲಾಗಿದೆ.
ಹುದ್ದೆ ವಿವರ
* ಮೆಕಾನಿಕಲ್ - 28
* ಫಿಜಿಕ್ಸ್ - 16
* ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ - 18
* ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಆಂಡ್ ಇನ್ಸ್ಟ್ರುಮೆಂಟೇಷನ್ - 10
* ಕಂಪ್ಯೂಟರ್ ಅಪ್ಲಿಕೇಷನ್ - 4
* ಇನ್ಸ್ಟ್ರುಮೆಂಟೇಷನ್/ ಇನ್ಸ್ಟ್ರುಮೆಂಟೇಷನ್ ಆಂಡ್ ಕಂಟ್ರೋಲ್ - 5
ವಿದ್ಯಾರ್ಹತೆ: ಕಂಪ್ಯೂಟರ್ ಅಪ್ಲಿಕೇಷನ್, ವಿಜ್ಞಾನ (ಫಿಜಿಕ್ಸ್)ದಲ್ಲಿ ಪದವಿ, ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಆಂಡ್ ಇನ್ಸ್ಟ್ರುಮೆಂಟೇಷನ್, ಇನ್ಸ್ಟ್ರುಮೆಂಟೇಷನ್/ ಇನ್ಸ್ಟ್ರುಮೆಂಟೇಷನ್ ಆಂಡ್ ಕಂಟ್ರೋಲ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಮಾಡಿರಬೇಕು.
ವೇತನ: ಎಲ್ಲ ಹುದ್ದೆಗೂ ಮಾಸಿಕ 20,000 ರೂ. ವೇತನ ಹಾಗೂ ಮನೆ ಬಾಡಿಗೆ ಭತ್ಯೆ ನೀಡಲಾಗುವುದು.
ವಯೋಮಿತಿ: ಗರಿಷ್ಠ 35 ವರ್ಷ ವಯೋಮಿತಿ ನಿಗಿಪಡಿಸಲಾಗಿದ್ದು, ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿ ಸೈನಿಕ, ಆರ್ಥಿಕವಾಗಿ ದುರ್ಬಲವಾಗಿರುವ ಹಾಗೂ ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 200 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಆನ್ಲೈನ್ ಮೂಲಕ ಪಾವತಿಸಲು ಸೂಚಿಸಲಾಗಿದೆ.
* ಲೈಬ್ರರಿ ಟ್ರೇನಿ - 4
ಯುಜಿಸಿಯಿಂದ ಮಾನ್ಯತೆ ಪಡೆದ ವಿವಿಯಿಂದ ಲೈಬ್ರರಿ ಮತ್ತು ಇನ್ಫಮೇಷನ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿಯನ್ನು 2019/ ಅದಕ್ಕಿಂತ ಹಿಂದಿನ ವರ್ಷದಲ್ಲಿ ಪಡೆದಿದ್ದು, ಕನಿಷ್ಠ ಶೇ.60 ಅಂಕ ಗಳಿಸಿರಬೇಕು. ಇಂಗ್ಲಿಷ್ನಲ್ಲಿ ಉತ್ತಮ ಸಂವಹನ ಕೌಶಲ ಕೇಳಲಾಗಿದೆ. ಗರಿಷ್ಠ 26 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಮಾಸಿಕ 20,000 ರೂ. ವೇತನ ಇದೆ. ಅರ್ಜಿ ಸಲ್ಲಿಸಲು 25.1.2022 ಕೊನೇ ದಿನವಾಗಿದ್ದು, ಅಧಿಸೂಚನೆಗೆ https://bit.ly/3JMPdVc ನೋಡಿ.
ಅರ್ಜಿ ಸಲ್ಲಿಸಲು ಕೊನೇ ದಿನ: 17.1.2022
ಅಧಿಸೂಚನೆಗೆ: https://bit.ly/3teKwO7
ಮಾಹಿತಿಗೆ: http://www.ipr.res.in