

ಭಾರತದ ಸರ್ಕಾರದ ಅಧೀನದಲ್ಲಿರುವ ಭಾರತೀಯ ಅಂಚೆ ಸೇವೆಯು ವಿಶ್ವದ ಅತಿ ದೊಡ್ಡ ಸಂಪರ್ಕ ಜಾಲವನ್ನು ಹೊಂದಿದೆ. ಇಲ್ಲಿನ ಬೆಂಗಳೂರು ಮತ್ತು ದೆಹಲಿ ಘಟಕಗಳಲ್ಲಿ ಸ್ಟಾಫ್ ಡ್ರೈವರ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆ ಹೊರಡಲಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
ಹುದ್ದೆಗಳ ವಿವರ
ಬೆಂಗಳೂರಿನಲ್ಲಿ 19 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಸಾಮಾನ್ಯ ಅಭ್ಯರ್ಥಿಗೆ 7, ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗೆ 2, ಎಸ್ಸಿ 2, ಎಸ್ಟಿ 1 ಮತ್ತು ಇತರ ವರ್ಗದ ಅಭ್ಯರ್ಥಿಗಳಿಗೆ 5 ಹುದ್ದೆ ಮೀಸಲಿಡಲಾಗಿದೆ. ದೆಹಲಿಯಲ್ಲಿ ಒಂದು ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ವಿದ್ಯಾರ್ಹತೆ
ಎಸ್ಎಸ್ಎಲ್ಸಿ ಉತ್ತೀರ್ಣರಾಗಿರಬೇಕು. ಲಘು ಮತ್ತು ಭಾರಿ ವಾಹನ ಚಾಲನಾ ಪರವಾನಗಿ ಪಡೆದಿರಬೇಕು. ಕನಿಷ್ಠ ಮೂರು ವರ್ಷ ಈ ಮೇಲಿನ ಎರಡೂ ವಾಹನಗಳನ್ನು ಚಲಾಯಿಸಿದ ಅನುಭವ ಪಡೆದಿರಬೇಕು.
ವೇತನ, ವಯೋಮಿತಿ
7ನೇ ವೇತನ ಶ್ರೇಣಿ ಅನ್ವಯ 2ನೇ ಹಂತದ ಅಂದರೆ ಮಾಸಿಕವ 19,900 ರೂ. ನಿಗದಿಪಡಿಸಲಾಗಿದೆ. 18ರಿಂದ 27 ವರ್ಷದೊಳಗಿನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಇತರ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಸಡಿಲಿಕೆ ಇರಲಿದೆ.
ಆಯ್ಕೆಯ ವಿಧಾನ
ಸಲ್ಲಿಕೆಯಾಗ ಅರ್ಜಿಗಳಲ್ಲಿ ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಚಾಲನಾ ಪರೀಕ್ಷೆ ಇರಲಿದೆ. ಈ ಸಂದರ್ಭದಲ್ಲಿ ಭಾರಿ ಹಾಗೂ ಲು ವಾಹನಗಳನ್ನು ಚಲಾಯಿಸಬೇಕು. ಇದರೊಂದಿಗೆ ಮೆಕ್ಯಾನಿಸಂ ಮತ್ತು ವಾಹನಗಳಲ್ಲಿನ ಸಣ್ಣ-ಪುಟ್ಟ ದೋಷಗಳನ್ನು ಪರಿಹರಿಸುವ ಜ್ಞಾನ ಅವಶ್ಯ. ಪರೀಕ್ಷೆ ನಡೆಯುವ ದಿನಾಂಕವನ್ನು ಇ-ಮೇಲ್ ಮೂಲಕ ತಿಳಿಸಲಾಗುವುದು.
ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕಗೊಳಗೆ ಅಗತ್ಯ ದಾಖಲೆಗಳೊಂದಿಗೆ ಅಧಿಸೂಚನೆಯಲ್ಲಿ ತಿಳಿಸಿದ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಸಲ್ಲಿಸತಕ್ಕದ್ದು. ಉಳಿದ ಯಾವ ವಿಧದ ಅರ್ಜಿಗಳನ್ನು ಪುರಸ್ಕರಿಸುವುದಿಲ್ಲ. ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಸಂಸ್ಥೆಯ ನಿರ್ಧಾರವೇ ಅಂತಿಮ. ಪರೀಕ್ಷೆಗೆ ಹಾಜರಾಗಲು ಯಾವುದೇ ಭತ್ಯೆ ನೀಡುವುದಿಲ್ಲ.
ಅರ್ಜಿ ಸಲ್ಲಿಸಬೇಕಾದ ವಿಳಾಸ: The Manager, Mail Motor Service, Bengaluru-560001
ಅರ್ಜಿ ಸಲ್ಲಿಸಲು ಕೊನೇ ದಿನ: 26.9.2022
ಅಧಿಸೂಚನೆಗೆ: https://bit.ly/3RrzfCC, https://bit.ly/3R8p71X
ಮಾಹಿತಿಗೆ: http://www.indiapost.gov.in