

ಭಾರತೀಯ ರೈಲ್ವೆಯ ಪಶ್ಚಿಮ ರೈಲ್ವೆ ವಿಭಾಗದಲ್ಲಿ ಕ್ರೀಡಾ ಕೋಟಾದಡಿ ವಿವಿಧ ಗ್ರೇಡ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾದ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ಮಹಿಳಾ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಲು ಅರ್ಹರು.
ಕ್ರೀಡಾವಾರು ವಿಂಗಡಣೆ
ವೇಯ್ಟ್ ಲಿಫ್ಟಿಂಗ್ ಫ್ರೀ ಸ್ಟೈಲ್-1,
ವೇಯ್ಟ್ ಲಿಫ್ಟಿಂಗ್-2
ಪವರ್ ಲಿಫ್ಟಿಂಗ್ (ಮಹಿಳೆ)-1, (ಪುರುಷ)-1
ವ್ರೆಸ್ಟಲಿಂಗ್-1
ಶೂಟಿಂಗ್-2
ಕಬಡ್ಡಿ (ಪುರುಷ)-2, (ಮಹಿಳೆ)-2
ಹಾಕಿ-3
ಜಿಮ್ನಾಸ್ಟಿಕ್-2
ಕ್ರಿಕೆಟ್ (ಪುರುಷ)-2 (ಮಹಿಳೆ)-1
ಬಾಲ್ ಬ್ಯಾಡ್ಮಿಂಟನ್-1
ವಿದ್ಯಾರ್ಹತೆ
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ದ್ವೀತಿಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.
ವೇತನ
ಪದವಿ ಅಭ್ಯರ್ಥಿಗಳಿಗೆ 4, 5ನೇ ಹಂತದ ವೇತನದನ್ವಯ 25,500ರಿಂದ 81,100 ರೂ. 29,200ರಿಂದ 92,300 ರೂ. ಇರಲಿದೆ. ದ್ವೀತಿಯ ಪಿಯುಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ 19,900ರಿಂದ 63,200 ರೂ. 21,700ರಿಂದ 69,100 ರೂ. ಮಾಸಿಕ ವೇತನ ಇರಲಿದೆ. ಇದರೊಂದಿಗೆ ಸರ್ಕಾರಿ ನಿಯಮದ ಪ್ರಕಾರ ಇತರ ಭತ್ಯೆ ಸಹ ಇರಲಿದೆ.
ವಯೋಮಿತಿ
1.1.2023ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿ ವಯೋಮಿತಿ ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. 2.1.1998ರೊಳಗೆ, 1.1.2005ರ ನಂತರ ಜನಿಸಿದವರಾಗಿರಬಾರದು.
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾದ ವಿಳಾಸಕ್ಕೆ ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ 500 ರೂ. ಅರ್ಜಿ ಶುಲ್ಕದೊಂದಿಗೆ (ಮೀಸಲಾತಿ ಅಭ್ಯರ್ಥಿ 250 ರೂ.) ಸಲ್ಲಿಸತಕ್ಕದ್ದು. ಪದವಿ ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಸಲ್ಲಿಸಬೇಕು. ಅಪೂರ್ಣ ಅರ್ಜಿಗಳನ್ನು ಪರಿಗಣಿಸುವುದಿಲ್ಲ.
ಆಯ್ಕೆ ಪ್ರಕ್ರಿಯೆ
ಕ್ರೀಡೆಯಲ್ಲಿನ ಸಾಧನೆ, ಶೈಣಿಕ ಅಂಕ ಆಧರಿಸಿ ಅರ್ಹರನ್ನು ಹುದ್ದೆಗೆ ಆಯ್ಕೆ ಮಾಡಲಾಗುವುದು. ಆಯ್ಕೆ ಸಂದರ್ಭದಲ್ಲಿ ಕ್ರೀಡಾ ಚಟುವಟಿಕೆಗೆ ಸಂಬಂಧಿಸಿದಂತೆ ದೈಹಿಕ ಪರೀಕ್ಷೆ ಇರಲಿದೆ. ಇದರ ಆಧಾರದ ಮೇಲೆ ಹುದ್ದೆಗಳಿಗೆ ನೇಮಕ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 4.10.2022
ಅಧಿಸೂಚನೆಗೆ: https://bit.ly/3U3nHaM
ಮಾಹಿತಿಗೆ: https://rrc-wr.com/