

ಬ್ಯಾಂಕ್ ಆಫ್ ಬರೋಡಾದ ರಿಸ್ಕ್ ಮ್ಯಾನೇಜ್ಮೆಂಟ್ ಆ್ಯಂಡ್ ಫ್ರಾಡ್ ರಿಸ್ಕ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆನ್ಲೈನ್ ಅರ್ಜಿಗಳಿಗೆ ಮಾತ್ರ ಮಾನ್ಯತೆ ಇದ್ದು, ದೇಶದ ಯಾವುದೇ ಭಾಗದಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರುವ ಅಭ್ಯಥಿರ್ಗಳು ಮಾತ್ರ ಅರ್ಜಿಸಲ್ಲಿಸುವಂತೆ ಸೂಚಿಸಲಾಗಿದೆ. ಎಲ್ಲ ಹುದ್ದೆಗಳಿಗೂ ವೃತ್ತಿ ಅನುಭವ ಕೇಳಲಾಗಿದೆ. ಈ ಹುದ್ದೆಗಳು 5 ವರ್ಷದ ಅವಧಿಗೆ ಒಳಪಟ್ಟಿದ್ದು, ಅಭ್ಯಥಿರ್ಗಳ ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಲಾಗುವುದು. ಆಯ್ಕೆಯಾದ ಅಭ್ಯಥಿರ್ಗಳು ಸಂಸ್ಥೆಯಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸುವುದಾಗಿ 1.5 ಲಕ್ಷ ರೂ.ನ ಸೇವಾ ಬಾಂಡ್ ಸಲ್ಲಿಸಬೇಕು.
* ಮ್ಯಾನೇಜರ್ - 4
ಕಂಪ್ಯೂಟರ್ ಸೈನ್ಸ್/ ಡೇಟಾ ಸೈನ್ಸ್/ಐಟಿ/ ಮಷಿನ್ ಲರ್ನಿಂಗ್ ಆ್ಯಂಡ್ ಎಐನಲ್ಲಿ ಬಿಇ/ ಬಿ.ಟೆಕ್, ಎಂಇ/ ಎಂ.ಟೆಕ್ ಅಥವಾ ಮ್ಯಾಥಮೆಟಿಕ್ಸ್/ ಸ್ಟಾ$ಟಿಸ್ಟಿಕ್ಸ್ನಲ್ಲಿ ಪದವಿ ಪಡೆದಿರಬೇಕು. ಕನಿಷ್ಠ 3 ವರ್ಷದ ವೃತ್ತಿ ಅನುಭವ ಕೇಳಲಾಗಿದೆ. ಕನಿಷ್ಠ 24 ವರ್ಷ, ಗರಿಷ್ಠ 34 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
* ಸೀನಿಯರ್ ಮ್ಯಾನೇಜರ್- 27
ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸ್/ ಮ್ಯಾಥಮೆಟಿಕ್ಸ್/ ಸ್ಟಾ$ಟಿಸ್ಟಿಕ್ಸ್ ಆ್ಯಂಡ್ ೈನಾನ್ಸ್ನಲ್ಲಿ ಸ್ನಾತಕೋತ್ತರ ಪದವಿ, ಸಿಎ/ ಎಂಬಿಎ/ ಪಿಜಿಡಿಎಂ ಮಾಡಿರಬೇಕು. ಕನಿಷ್ಠ 27, ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಕನಿಷ್ಠ 3-5 ವರ್ಷ ವೃತ್ತಿ ಅನುಭವ ಕೇಳಲಾಗಿದೆ.
* ಹೆಡ್/ ಡೆಪ್ಯುಟಿ ಹೆಡ್ - 11
ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸ್/ ಮ್ಯಾಥಮೆಟಿಕ್ಸ್/ ಸ್ಟಾ$ಟಿಸ್ಟಿಕ್ಸ್ ಆ್ಯಂಡ್ ೈನಾನ್ಸ್ನಲ್ಲಿ ಸ್ನಾತಕೋತ್ತರ ಪದವಿ, ಸಿಎ/ ಎಂಬಿಎ/ ಪಿಜಿಡಿಎಂ ಮಾಡಿರಬೇಕು. ಕನಿಷ್ಠ 32, ಗರಿಷ್ಠ 55 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಅರ್ಜಿಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯಥಿರ್ಗಳಿಗೆ 100 ರೂ., ಉಳಿದ ಅಭ್ಯಥಿರ್ಗಳಿಗೆ 600 ರೂ. ಅಜಿರ್ಶುಲ್ಕ ನಿಗದಿಪಡಿಸಲಾಗಿದೆ.
ಅರ್ಜಿಸಲ್ಲಿಸಲು ಕೊನೇ ದಿನ: 15.3.2022
ಅಧಿಸೂಚನೆಗೆ: https://bit.ly/3Ijqqqy
ಮಾಹಿತಿಗೆ:http://www.bankofbaroda.in