More

    ಸರ್ಕಾರಿ ನೌಕರಿ ಹುಡುಕುತ್ತಿರುವಿರಾ? ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳಿಗೆ ಆಹ್ವಾನ- ಲಕ್ಷ ರೂ.ವರೆಗೆ ಸಂಬಳ

    ಕರ್ನಾಟಕ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಯಾವ ಇಲಾಖೆಯಲ್ಲಿ ಯಾವ ಹುದ್ದೆ ಇದೆ, ಅದರ ಅರ್ಹತಾ ಮಾನದಂಡಗಳನ್ನು ಇಲ್ಲಿ ನೀಡಲಾಗಿದೆ.

    * ತಾಂತ್ರಿಕ ಸಮಾಲೋಚಕ ಕೆಲಸ
    ಬೆಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಖನಿಜಾನ್ವೇಷಣಾ ವಿಭಾಗದಲ್ಲಿ ಕೆಲಸ ಮಾಡಲು ಹೊರಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಸಮಾಲೋಚಕ ಹುದ್ದೆಗೆ ಅರ್ಹ ಅಭ್ಯಥಿರ್ಯಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಯಾಲಜಿ/ ಅಪ್ಲೆಡ್​ ಜಿಯಾಲಜಿ/ ಅರ್ಥ್​ ಸೈನ್ಸ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಗರಿಷ್ಠ 65 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಸಿಕ 1,00,000 ರೂ. ವೇತನ ಇದೆ.ಕನಿಷ್ಠ 25 ವರ್ಷಗಳ ವೃತ್ತಿ ಅನುಭವ ಕೇಳಲಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 28.2.2022

    ಅರ್ಜಿ ಸಲ್ಲಿಕೆ ವಿಳಾಸ: ಉಪನಿರ್ದೇಶಕರು (ಯೋಜನೆ ಮತ್ತು ನಿಗಾ), 4ನೇ ಮಹಡಿ, ನಿರ್ದೇಶಕರ ಕಚೇರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ನಂ.49, ಖನಿಜ ಭವನ, ರೇಸ್​ಕೋರ್ಸ್​ ರಸ್ತೆ, ಬೆಂಗಳೂರು
    ಅಧಿಸೂಚನೆಗೆ: https://bit.ly/3I2j2iW

    * ಕಾನೂನು ಮುಖ್ಯಸ್ಥ ಹುದ್ದೆ
    ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಕಾನೂನು ಕೋಶದ ಮುಖ್ಯಸ್ಥರ (ಹೆಡ್​ ಆಫ್​ ದಿ ಲೀಗಲ್​ ಸೆಲ್​) ಹುದ್ದೆಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸೇವಾ ವಿಷಯಗಳಲ್ಲಿ, ಕಾಮಿರ್ಕರ ಕಾನೂನು, ಭೂ ಕಾನೂನು ಇತ್ಯಾದಿ ವಿಷಯಗಳಲ್ಲಿ ಪರಿಣತಿ ಹೊಂದಿರುವ ಮತ್ತು ಕರ್ನಾಟಕದಲ್ಲಿ ಕನಿಷ್ಠ 10 ವರ್ಷ ವಕೀಲ ವೃತ್ತಿ ಅನುಭವ ಹೊಂದಿರುವ ಅಥವಾ ನಿವೃತ್ತ ಜಿಲ್ಲಾ ಮತ್ತು ಸೆಷನ್​ ನ್ಯಾಯಾಧೀಶರು ಅರ್ಜಿ ಸಲ್ಲಿಸಬಹುದು. ಗರಿಷ್ಠ 65 ವರ್ಷ ವಯೋಮಿತಿ ಇದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 28.2.2022

    ಅಧಿಸೂಚನೆಗೆ: ಫೆ.18ರ ವಿಜಯವಾಣಿ ಪತ್ರಿಕೆ ನೋಡಿ
    ಮಾಹಿತಿಗೆ: https://bbmp.gov

    * ಆಥಿರ್ಕ ಸಲಹೆಗಾರರಾಗಿ
    ಕರ್ನಾಟಕ ಗ್ರಾಮೀಣ ಬ್ಯಾಂಕ್​ನ “ಆಥಿರ್ಕ ಸಲಹಾ ಕೇಂದ್ರ’ದ ಬೆಂಗಳೂರು ಜಿಲ್ಲೆಯ ದೇವನಹಳ್ಳಿ ಮತ್ತು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಕೇಂದ್ರಕ್ಕೆ ಆಥಿರ್ಕ ಸಲಹೆಗಾರರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, 3 ವರ್ಷದ ಅವಧಿಗೆ ಒಳಪಟ್ಟಿದೆ. ಬ್ಯಾಂಕಿಂಗ್​ ಜ್ಞಾನ, ಹಣಕಾಸಿನ ಸೇವೆಗಳ/ ಸಾಮಾಜಿಕ ಭದ್ರತಾ ಯೋಜನೆಗಳ ತಿಳುವಳಿಕೆಯುಳ್ಳ 62 ವರ್ಷದೊಳಗಿನ ಪದವೀಧರರು ಹಾಗೂ ನಿವೃತ್ತ ಬ್ಯಾಂಕ್​ ಅಧಿಕಾರಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸ್ಥಳಿಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಮಾಸಿಕ 17,100 ಹಾಗೂ ಪ್ರಯಾಣ ಭತ್ಯೆಯಾಗಿ 3000 ರೂ. ನೀಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 5.3.2022

    ಅಧಿಸೂಚನೆಗೆ: ಫೆ.18ರ ವಿಜಯವಾಣಿ ಪತ್ರಿಕೆ ನೋಡಿ
    ಮಾಹಿತಿಗೆ: http://www.karnatakagraminbank.com

    * ಸಲಹೆಗಾರರ ನೇಮಕ
    ಆಲ್​ ಇಂಡಿಯಾ ಕೌನ್ಸಿಲ್​ ಫಾರ್​ ಟೆಕ್ನಿಕಲ್​ ಎಜುಕೇಷನ್​ (ಎಐಸಿಟಿಇ)ಯ ಬೆಂಗಳೂರು ಹಾಗೂ ದೆಹಲಿ ಘಟಕಗಳಲ್ಲಿ ಸಲಹೆಗಾರ (ಕನ್ಸಲ್ಟಂಟ್​) ಹುದ್ದೆಗೆ ನಿವೃತ್ತ ಕೆಂದ್ರ/ರಾಜ್ಯ ಸರ್ಕಾರ/ ಸ್ವಾಯತ್ತ ಸಂಸ್ಥೆ/ ಕೇಂದ್ರ ಅಥವಾ ರಾಜ್ಯ ವಿಶ್ವವಿದ್ಯಾಲಯಗಳ ಅಧಿಕಾರಿಗಳು ಅರ್ಜಿ ಸಲ್ಲಿಸಬಹುದು.
    ಅರ್ಜಿ ಸಲ್ಲಿಸಲು ಕೊನೇ ದಿನ: 8.3.2022

    ಅಧಿಸೂಚನೆಗೆ: https://bit.ly/3gTzeai

    ಮಾಹಿತಿಗೆ: /www.aicte-india.org

    ಕಾರು ಚಲಾಯಿಸಲು ಬರುತ್ತಾ? ಅಂಚೆ ಇಲಾಖೆಯಲ್ಲಿದೆ 46 ಹುದ್ದೆಗಳು- 63 ಸಾವಿರ ರೂ.ವರೆಗೆ ಸಂಬಳ

    ಇಂಜಿನಿಯರಿಂಗ್‌ ಪದವೀಧರರಿಗೆ ಜಲ ವಿದ್ಯುತ್​ ಮಂಡಳಿಯಲ್ಲಿವೆ 133 ಹುದ್ದೆಗಳು: 1.20 ಲಕ್ಷ ರೂ.ವರೆಗೆ ಸಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts