ಎಸ್‌ಎಸ್‌ಎಲ್‌ಸಿ, ಐಟಿಐ ಮುಗಿಸಿರುವಿರಾ? ರೈಲ್ವೆ ಇಲಾಖೆಯಲ್ಲಿ 1785 ಹುದ್ದೆಗಳಿಗೆ ಅರ್ಜಿ ಆಹ್ವಾನ

railway-job
Published on

ನವದೆಹಲಿ: ಆಗ್ನೇಯ ರೈಲ್ವೆ ವಲಯದಲ್ಲಿ ಖಾಲಿ ಇರುವ 1785 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಈ ಹುದ್ದೆಗಳ ನೇಮಕಾತಿ ನಡೆಯಲಿದೆ.

10 ನೇ ತರಗತಿ ಅಥವಾ ಅದಕ್ಕೆ ಸಮಾನವಾದ ಶಿಕ್ಷಣ ಅರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು. ಕನಿಷ್ಠ 50 ಪ್ರತಿಶತದೊಂದಿಗೆ ಉತ್ತೀರ್ಣರಾಗಿರಬೇಕು. ಇದಲ್ಲದೆ, ಐಟಿಐ ಪಾಸ್ ಪ್ರಮಾಣಪತ್ರವನ್ನು ಹೊಂದಿರಬೇಕು.

ಅರ್ಜಿ ವಿವರ ಹೀಗಿದೆ.
ಖರಗಪುರ್ ವರ್ಕ್‌ಷಾಪ್‌- 360 ಹುದ್ದೆಗಳು,

ಸಿಗ್ನಲ್ ಆ್ಯಂಡ್ ಟೆಲಿಕಾಮ್ - 87 ಹುದ್ದೆಗಳು,

ಟ್ರ್ಯಾಕ್ ಮೆಷಿನ್ ವರ್ಕ್ಶಾಪ್- 120 ಹುದ್ದೆಗಳು,

ಎಸ್ಇಇ - 28 ಹುದ್ದೆಗಳು,

ಕ್ಯಾರೇಜ್ ಆ್ಯಂಡ್ ವೇಗಾನ್ ವಿಭಾಗ- 121 ಹುದ್ದೆಗಳು,

ಡಿಸೇಲ್ ಲೋಕೋಶೆಡ್ -50 ಹುದ್ದೆಗಳು,

ಸೀನಿಯರ್ ಡಿ - 90 ಹುದ್ದೆಗಳು,

ಟಿಆರ್‌ಡಿ ಡಿಪೋ/ ಎಲೆಕ್ಟ್ರಿಕಲ್‌ - 40 ಹುದ್ದೆಗಳು

ಇಎಂಯು ಶೆಡ್/ಎಲೆಕ್ಟ್ರಿಕಲ್/ಟಿಪಿಕೆಆರ್ 40 ಹುದ್ದೆಗಳು,

ಎಲೆಕ್ಟ್ರಿಕ್ ಲೋಕೇಶೆಡ್/ಸಂತ್ರಗಚಿ - 36 ಹುದ್ದೆಗಳು,

ಸೀನಿಯರ್ ಡಿ (ಜಿ) ಚಕ್ರದರ್ಪುರ್ - 93 ಹುದ್ದೆಗಳು,

ಎಲೆಕ್ಟ್ರಾನಿಕ್ ಟ್ರಾಕ್ಷನ್ ವಿಭಾಗ- 30 ಹುದ್ದೆಗಳು,

ಕ್ಯಾರೇಜ್ ಆ್ಯಂಡ್‌ ವೇಗಾನ್ ವಿಭಾಗ - 65 ಹುದ್ದೆಗಳು,

ಎಲೆಕ್ಟ್ರಿಕ್ ಲೋಕೋ ಶೆಡ್/ಟಾಟಾ 72 ಹುದ್ದೆಗಳು

ಇಂಜಿನಿಯರಿಂಗ್ ವರ್ಸ್‌ಷಾಪ್‌ /ಸಿನಿ - 100 ಹುದ್ದೆಗಳು,

ಟ್ರ್ಯಾಕ್ ಮೆಷಿನ್ ವರ್ಕ್ಶಾಪ್/ಸಿನಿ - 7 ಹುದ್ದೆಗಳು,

ಎಲೆಕ್ಟ್ರಿಕ್ ಲೋಕೋ ಶೆಡ್/ಬೊಂಡಾಮುಂಡ - 50 ಹುದ್ದೆಗಳು,

ಡೀಸೆಲ್ ಲೋಕೋ ಶೆಡ್/ಬೊಂಡಾಮುಂಡ - 52 ಹುದ್ದೆಗಳು,

ಸೀನಿಯರ್‌ ಡಿಇಇ (ಜಿ)- ಆಗ್ರಾ: 30 ಹುದ್ದೆಗಳು

ಸೀನಿಯರ್ ಡಿಇಇ ರಾಂಚಿ- 30 ಹುದ್ದೆಗಳು,

ಟಿಆರ್‌ಡಿ ವಿಭಾಗ/ಎಲೆಕ್ಟ್ರಕಲ್/ರಾಂಚಿ - 10 ಹುದ್ದೆಗಳು,

ಎಸ್ಎಸ್ಇ - 10 ಹುದ್ದೆಗಳು

ನೇಮಕಾತಿ ವಿವರ
ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಷಾರ್ಟ್‌ಲಿಸ್ಟ್‌ ಆದ ಅಭ್ಯರ್ಥಿಗಳ ದಾಖಲಾತಿಗಳನ್ನ ಪರಿಶೀಲನೆ ನಡೆಸಿ ಬಳಿಕ ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುವುದು. ಆನಂತರ ಆಯ್ಕೆಯಾದ ಅಭ್ಯರ್ಥಿಯನ್ನು ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತದೆ. ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ:
100 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ, ಎಸ್ಟಿ, ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ವಯೋಮಿತಿ: ಅಭ್ಯರ್ಥಿಗಳ ಗರಿಷ್ಠ ವಯಸ್ಸು 24 ವರ್ಷ

ಕೊನೆಯ ದಿನ: ಡಿಸೆಂಬರ್‌ 14.

ಹೆಚ್ಚಿನ ಮಾಹಿತಿಗೆ http://rrcser.co.in/pdf
ಅಧಿಕೃತ ವೆಬ್‌ಸೈಟ್‌: http://rrcser.co.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net