More

    ಲಖಿಂಪುರ ಖೇರಿ ಹಿಂಸಾಚಾರ: ಕೇಂದ್ರ ಸಚಿವನ ಪುತ್ರನಿಗೆ ಸಿಗಲಿಲ್ಲ ಜಾಮೀನು- ಕೋರ್ಟ್‌ ಹೇಳಿದ್ದೇನು?

    ಲಖಿಂಪುರ ಖೇರಿ (ಉತ್ತರ ಪ್ರದೇಶ): ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಉತ್ತರಪ್ರದೇಶದ ಲಖಿಂಪುರ ಖೇರಿಯ ಘಟನೆಯ ಆರೋಪಿ ಕೇಂದ್ರ ಸಚಿವ ಅಜಯ್​ ಮಿಶ್ರಾ ಪುತ್ರ ಆಶಿಶ್​ ಮಿಶ್ರಾಗೆ ಇಲ್ಲಿಯ ಜಿಲ್ಲಾ ಕೋರ್ಟ್‌ ಜಾಮೀನು ನಿರಾಕರಿಸಿದೆ.

    ಅಕ್ಟೋಬರ್ 3ರಂದು ನಡೆದಿದ್ದ ಈ ಘಟನೆಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿರುವ ಆರೋಪ ಇವರ ಮೇಲಿದೆ. ಈ ಘಟನೆಯಲ್ಲಿ ನಾಲ್ವರು ರೈತರು ಮೃತಪಟ್ಟಿದ್ದರು. ಇದೇ ವೇಳೆ ನಡೆದ ಹಿಂಸಾಚಾರ ಪ್ರಕರಣದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ಒಬ್ಬ ಪತ್ರಕರ್ತ ಕೂಡ ಮೃತಪಟ್ಟಿದ್ದಾರೆ. ನಾಲ್ವರು ರೈತರ ಮೇಲೆ ಕಾರು ಹರಿಸಿರುವ ಆರೋಪ ಆಶಿಶ್‌ ಮಿಶ್ರಾ ಸೇರಿದಂತೆ ಲವ್​ ಕುಶ್​ ರಾಣಾ ಮತ್ತು ಆಶಿಶ್​ ಪಾಂಡೆ ಅವರ ಮೇಲಿದೆ. ಎಲ್ಲರಿಗೂ ಜಿಲ್ಲಾ ಕೋರ್ಟ್‌ ಈಗ ಜಾಮೀನು ನಿರಾಕರಿಸಿದೆ.

    ಇದು ಗಂಭೀರವಾಗಿರುವ ಆರೋಪವಾಗಿದೆ. ಈ ಹಿಂಸಾಚಾರದ ಸ್ವರೂಪ ನೋಡಿದರೆ ಸದ್ಯ ಜಾಮೀನು ನೀಡುವುದು ಸಮಂಜಸವಲ್ಲ ಎನಿಸುತ್ತದೆ. ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗಲೇ ಜಾಮೀನು ನೀಡುವುದು ಸಾಧ್ಯವಿಲ್ಲ. ಘಟನೆಗೆ ಸಂಬಂಧಪಟ್ಟಂತೆ ಕೆಲವು ಸಾಕ್ಷಿಗಳ ಹೇಳಿಕೆ ಪಡೆದುಕೊಳ್ಳಲಾಗಿದೆ. ಅದರಲ್ಲಿ ಬಹುತೇಕರು ಹೇಳಿದ್ದು ಆಶಿಶ್​ ಮಿಶ್ರಾ ಸೇರಿದಂತೆ ಇತರ ಆರೋಪಿಗಳ ಹೆಸರು ಹೇಳಿದ್ದಾರೆ. ರೈತರಿಗೆ ಡಿಕ್ಕಿ ಹೊಡೆದ ಮಹೀಂದ್ರಾ ಥಾರ್​ ವಾಹನದಿಂದ ಆಶಿಶ್​ ಮಿಶ್ರಾ ಮತ್ತು ಇತರ ಆರೋಪಿಗಳು ಕೆಳಗೆ ಇಳಿದಿದ್ದನ್ನು ತಾವು ನೋಡಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇನ್ನು ಕೆಲವರು ಈ ಎಲ್ಲಾ ಆರೋಪಿಗಳು ಓಡಿಹೋಗುವಾಗ ಅವರು ರೈತರೆಡೆಗೆ ಗುಂಡು ಹಾರಿಸಿದ್ದನ್ನು ನೋಡಿರುವುದಾಗಿ ಹೇಳಿದ್ದಾರೆ. ಆದ್ದರಿಂದ ಇಂಥ ಸಮಯದಲ್ಲಿ ಸದ್ಯ ಜಾಮೀನು ನೀಡಿಕೆ ಸಾಧ್ಯವಿಲ್ಲ ಎಂದಿದ್ದಾರೆ ನ್ಯಾಯಾಧೀಶರು.

    ಏನಿದು ಘಟನೆ?
    ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಘಟನೆ ನಡೆದ ದಿನ (ಅ. 3) ಉತ್ತರಪ್ರದೇಶ ಉಪಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಅಜಯ್​ ಮಿಶ್ರಾ ಲಖಿಂಪುರ ಖೇರಿಗೆ ಭೇಟಿ ನೀಡುವವರಿದ್ದರು. ಆದರೆ ಇದನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಅಲ್ಲಿ ರಭಸದಿಂದ ನುಗ್ಗಿದ ಕಾರಿನಿಂದಾಗಿ ಒಬ್ಬ ರೈತ ಮೃತಪಟ್ಟಿದ್ದ. ಕೊನೆಗೆ ಗುಂಡು ಹಾರಿಸಿರುವುದಾಗಿ ಹೇಳಲಾಗಿದೆ. ಈ ವಾಹನಗಳು ಅಜಯ್​ ಮಿಶ್ರಾ ಪುತ್ರ ಆಶಿಶ್​ ಮಿಶ್ರಾ ಬೆಂಗಾವಲು ಪಡೆದಿದ್ದು ಎಂದು ಹೇಳಲಾಗಿದೆ.

    VIDEO: ಜನ್ಮದಿನದಂದು ಆಶೀರ್ವಚನ ನೀಡುತ್ತಲೇ ಲಿಂಗೈಕ್ಯರಾದ ಗೋಕಾಕ್‌ನ ಸ್ವಾಮೀಜಿ- ವಿಡಿಯೋದಲ್ಲಿ ಸೆರೆ

    ಡ್ರಗ್ಸ್‌ ಮಾರಾಟ ದಂಧೆಗಿಳಿದ ಅಮೆಜಾನ್‌? ಸಿಹಿತುಳಸಿ ನೆಪದಲ್ಲಿ ನಾಲ್ಕು ತಿಂಗಳಲ್ಲಿ ಒಂದು ಟನ್‌ ಮಾರಾಟ

    ನಿಮ್ಮ ಒಂದು ಸಹಿ ಚಾಮುಂಡಿ ಬೆಟ್ಟವನ್ನು ಉಳಿಸಬಹುದು: ದಯವಿಟ್ಟು ಕೈಜೋಡಿಸಿ ಎಂದ ಯದುವೀರ್‌ ಒಡೆಯರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts