ಗುಂಡು ಕೊಟ್ಟಿಲ್ಲವೆಂದು ವಿಮಾನಕ್ಕೇ ಬೆಂಕಿ ಇಡಲು ಹೊರಟಳು ಈ ಮಾಡೆಲ್​- ಹೌಹಾರಿದ ಪ್ರಯಾಣಿಕರು!

model
Published on

ಕ್ಯಾಲಿಫೋರ್ನಿಯಾ: ಕುಡಿಯಲು ಮದ್ಯ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಮಾಡೆಲ್​ ಒಬ್ಬಳು ವಿಮಾನಕ್ಕೇ ಬೆಂಕಿ ಇಡುವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಮೆಲ್ಬರ್ನ್-ಆಕ್ಲೆಂಡ್ ಫ್ಲೈಟ್‌ನಲ್ಲಿ ಪ್ರಯಾಣಿಸುತ್ತಿದ್ದ ಹನ್ನಾ ಲೇ ಪಿಯರ್ಸನ್ ಎಂಬ ಮಾಡೆಲ್ ಇಂಥದ್ದೊಂದು ಬೆದರಿಕೆ ಹಾಕುವ ಮೂಲಕ ಇಡೀ ವಿಮಾನದಲ್ಲಿ ಇದ್ದ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದ್ದಾಳೆ.

ಪ್ರಯಾಣದ ವೇಳೆ ತನಗೆ ಒಂದು ಗ್ಲಾಸ್ ಮದ್ಯ ಕೇಳಿದ್ದಾಳೆ. ಆದರೆ ಆಕೆ ಕೇಳಿರುವ ಮದ್ಯವನ್ನು ಪೂರೈಕೆ ಮಾಡುವುದು ನಿಯಮದ ಪ್ರಕಾರ ಇರಲಿಲ್ಲ. ಇದರಿಂದ ಸಿಟ್ಟುಗೊಂಡ ಹನ್ನಾ ರೋಷಾವೇಷದಿಂದ ಸಿಡಿದೆದ್ದು, ಕೂಡಲೇ ಕೊಡದಿದ್ದರೆ ವಿಮಾನಕ್ಕೆ ಬೆಂಕಿ ಹಚ್ಚುವುದಾಗಿ ಕೂಗಾಡಿದ್ದಾಳೆ.

Pierson has been remanded on bail to be sentenced on June 23

ಕೂಡಲೇ ಆಕೆಯ ವಿರುದ್ಧ ದೂರು ದಾಖಲು ಮಾಡಲಾಗಿದೆ. ನಂತರ ಯುವತಿಯನ್ನು ಕ್ರೈಸ್ಟ್‌ಚರ್ಚ್‌ನ ಜಿಲ್ಲಾ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಮಾಡೆಲ್ ‌ಅನ್ನು ವಿಚಾರಣೆಗೆ ಒಳಪಡಿಸಲಾಯಿತು. ನಂತರ ಜಾಮೀನು ನೀಡಿರುವ ಕೋರ್ಟ್​ ಯುವತಿಗೆ ಎಚ್ಚರಿಕೆ ನೀಡಿದೆ.

ವಿಮಾನದ ಪ್ರಯಾಣದ ವೇಳೆ ತೆಗೆದುಕೊಂಡಿರುವ ಟಿಕೆಟ್​ ಆಕೆ ಕೇಳಿದ ಮದ್ಯದ ಖರ್ಚನ್ನು ಒಳಗೊಂಡಿರಲಿಲ್ಲ. ಆದ್ದರಿಂದ ಅದೇ ಆಕೆಗೆ ಬೇಕಾದಲ್ಲಿ ಹಣವನ್ನು ಕೊಟ್ಟು ಖರೀದಿ ಮಾಡಬಹುದೆಂದು ವಿಮಾನ ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದ ಸಿಟ್ಟುಗೊಂಡ ಯುವತಿ ಬೆಂಕಿ ಹಚ್ಚುವ ರಂಪಾಟ ಮಾಡಿದಳು. ನಂತರ ಆಕೆಯ ವರ್ತನೆ ಅತಿರೇಕಕ್ಕೆ ಹೋದಾಗ ಸೀಟ್‌ಬೆಲ್ಟ್‌ ಬಳಸಿ ಕಟ್ಟಿಹಾಕಿದ್ದರು.

ವಿಮಾನದಲ್ಲಿ 72 ಮಂದಿ ಪ್ರಯಾಣಿಕರು ಇದ್ದರು. ಈಕೆಗೆ ಕುಡಿತದ ಚಟವಿದ್ದು, ಇದೇ ಕಾರಣದಿಂದ ಹಿಂದೆಯೂ ಸಹ ಹೀಗೆ ಎಡವಟ್ಟು ಮಾಡಿಕೊಂಡಿದ್ದಾಳೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಈಕೆ ಈ ರೀತಿ ಮಾಡಿರುವುದು ಅಕ್ಷಮ್ಯ. ಯುವತಿ ಅಪರಾಧಿ ಎಂದಿದೆ ಕೋರ್ಟ್​. ಶಿಕ್ಷೆಯ ಪ್ರಮಾಣ ಎಷ್ಟೆಂದು ಜೂನ್ 23ರಂದು ನಿರ್ಧಾರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net