More

    ರಾಜ್ಯದಲ್ಲಿ 5 ದಿನ ಗುಡುಗು ಮಿಂಚು ಸಹಿತ ಮಳೆ, ಹವಾಮಾನ ಇಲಾಖೆ ನೀಡಿದೆ ಮುನ್ಸೂಚನೆ

    ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮುಂದಿನ 5 ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

    ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಗಾಳಿಯ ಒತ್ತಡ ಕಡಿಮೆ ಆಗಿರುವ ಪರಿಣಾಮ ತೇವಾಂಶ ಭರಿತ ಮೋಡಗಳು ಸೃಷ್ಟಿಯಾಗಿವೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಏ.9ರಿಂದ ಏ.13ರವರೆಗೆ ಗುಡುಗು ಮಿಂಚು ಸಹಿತ ಮಳೆಯಾಗಲಿದೆ.

    ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರದಲ್ಲಿ ಮುಂದಿನ 4 ದಿನ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಮತ್ತು ಕಲಬುರಗಿಯಲ್ಲಿ ಏ.9ರಂದು ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

    ಈ ಬಾರಿ ದೇಶದಲ್ಲಿ ಮುಂಗಾರು ಮಳೆ ಆಶಾದಾಯಕವಾಗಿದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಮಾಸಾಂತ್ಯ ವೇಳೆಗೆ ಭಾರತೀಯ ಹವಾಮಾನ ಇಲಾಖೆ ವರದಿ ಬಿಡುಗಡೆ ಮಾಡಲಿದೆ. ಜತೆಗೆ, ಮೇನಲ್ಲಿ ಬಿಡುಗಡೆ ಆಗಲಿರುವ ಮತ್ತೊಂದು ವರದಿಯಲ್ಲಿ ದೇಶದ ಮಾನ್ಸೂನ್ ಬಗ್ಗೆ ನಿಖರ ಮಾಹಿತಿ ಹೊರಬೀಳಲಿದೆ ಎಂದು ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

    ಲಾಕ್​ಡೌನ್​ ಇದ್ದಾಗಲೂ ವೇತನ ಕೊಟ್ವಿ… ಇಂಥ ಬಿಕ್ಕಟ್ಟಿನ ದಿನಗಳಲ್ಲಿ ಸಂಸ್ಥೆ ಹಾಳಾಗಲು ಬಿಡ್ತೀರೇನಪ್ಪಾ…

    ಮುಕೇಶ್​ ಅಂಬಾನಿ ಕುಟುಂಬಸ್ಥರಿಗೆ ಶಾಕ್​ ನೀಡಿದ ಸೆಬಿ: 25 ಕೋಟಿ ರೂಪಾಯಿ ದಂಡ

    ಶಾಲೆಗೆ ರಜೆ ಎಂದು ಮೈಸೂರಿಗೆ ಹೊರಟಿರುವಿರಾ? ಹಾಗಿದ್ರೆ ಇದನ್ನು ತಪ್ಪದೇ ಓದಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts