ಎಸ್‌ಎಸ್‌ಎಲ್‌ಸಿ, ಐಟಿಐ ಉತ್ತೀರ್ಣರಿಗೆ ಭರ್ಜರಿ ಅವಕಾಶ: ರೈಲ್ವೆಯಲ್ಲಿ 4 ಸಾವಿರ ಹುದ್ದೆಗಳಿಗೆ ಆಹ್ವಾನ

railway
Published on

ನವದೆಹಲಿ: ದಕ್ಷಿಣ ಮಧ್ಯ ರೈಲ್ವೆ ಸುಮಾರು 4000 ಅಪ್ರೆಂಟಿಸ್​​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಹುದ್ದೆಗಳ ವಿವರ ಹೀಗಿವೆ:

ಫಿಟ್ಟರ್​​ - 1460 ಹುದ್ದೆ

ಎಸಿ ಮೆಕ್ಯಾನಿಕ್​ - 250 ಹುದ್ದೆ

ಬಡಗಿ - 18 ಹುದ್ದೆ

ಡಿಸೇಲ್​ ಮೆಕ್ಯಾನಿಕ್​ - 531 ಹುದ್ದೆ​

ಎಲೆಕ್ಟ್ರಿಷಿಯನ್​ - 1019 ಹುದ್ದೆ

ಎಲೆಕ್ಟ್ರೋನಿಕ್​ ಮೆಕ್ಯಾನಿಕ್​ - 92 ಹುದ್ದೆ

ಮಷಿನಿಸ್ಟ್​ - 71 ಹುದ್ದೆ

ಎಂಎಂಟಿಎಂ - 5 ಹುದ್ದೆ

ಪೇಂಟರ್​ - 80 ಹುದ್ದೆ

ವೆಲ್ಡರ್​ - 533 ಹುದ್ದೆ

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು 10ನೇ ತರಗತಿ ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆ (10+2 ಪರೀಕ್ಷಾ ವ್ಯವಸ್ಥೆಯ ಅಡಿಯಲ್ಲಿ) ಕನಿಷ್ಠ 50 ಪ್ರತಿಶತ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಲ್ಲದೇ ಮಾನ್ಯತೆ ಪಡೆದ ಸಂಸ್ಥೆಯಿಂದ ಐಟಿಐ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ವಯಸ್ಸಿನ ಮಿತಿ

2021ರ ಅಕ್ಟೋಬರ್​ 4ನೇ ತಾರೀಖಿಗೆ ಅನ್ವಯವಾಗುವಂತೆ ಅಭ್ಯರ್ಥಿಗೆ ಕನಿಷ್ಠ 15 ಹಾಗೂ ಗರಿಷ್ಠ 25 ವರ್ಷ ವಯಸ್ಸಾಗಿರಬೇಕು. ಎಸ್‌ಸಿಎಸ್‌ಟಿಯವರಿಗೆ ಐದು ವರ್ಷ ಹಾಗೂ ಓಬಿಸಿಗೆ 3 ವರ್ಷಗಳ ಸಡಿಲಿಕೆ ಇವೆ.

ಕೊನೆಯ ದಿನಾಂಕ : ನವೆಂಬರ್​ 3

ಈ ಸಂಬಂಧ ಅಧಿಸೂಚನೆಯನ್ನು http://scr.indianrailways.gov.in ನಲ್ಲಿ ಪ್ರಕಟಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿ ಹಾಗೂ ಸಂಪೂರ್ಣ ವಿವರ: http://20.198.104.232/Act_App_Notification-04102021.pdf

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net