

ದೇಶದ ಪ್ರಮುಖ ಅಣು ವಿದ್ಯುತ್ ಶಕ್ತಿ ಸ್ಥಾವರಗಳಲ್ಲಿ ಒಂದಾಗಿರುವ ಉತ್ತರಕನ್ನಡ ಜಿಲ್ಲೆ ಕೈಗಾದಲ್ಲಿರುವ ನ್ಯೂಕ್ಲಿಯರ್ ಪವರ್ ಕಾಪೋರ್ರೇಷನ್ ಆ್ ಇಂಡಿಯಾ (ಎನ್ಪಿಸಿಐಎಲ್) ಅಧೀನದ ಟಕದಲ್ಲಿ ಟ್ರೇಡ್ ಅಪ್ರೆಂಟೀಸ್ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಸ್ಟೈಪೆಂಡ್ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಉದ್ಯೋಗ ತರಬೇತಿಯನ್ನು ನೀಡಲಾಗುತ್ತದೆ. ಒಬ್ಬ ಅಭ್ಯರ್ಥಿಒಂದು ಸ್ಥಾನಕ್ಕೆ ಮಾತ್ರ ಅರ್ಜಿಸಲ್ಲಿಸಬಹುದು.
ಹುದ್ದೆ ವಿವರ
* ಫಿಟ್ಟರ್ - 20
* ರ್ಟನರ್ - 4
* ಮಷಿನಿಸ್ಟ್ - 2
* ಎಲೆಕ್ಟ್ರಿಷಿಯನ್ - 30
* ಸ್ಟ್ರಕ್ಚರಲ್ ವೆಲ್ಡರ್ ಆ್ಯಂಡ್ ಗ್ಯಾಸ್ ಕಟರ್ - 4
* ಎಲೆಕ್ಟ್ರಾನಿಕ್ ಮೆಕ್ಯಾನಿಕ್ - 9
* ಡ್ರಾಟ್ಸ್ಮೆನ್ (ಸಿವಿಲ್) - 4
* ಸರ್ವೇಯರ್ - 2
ಶೈಕ್ಷಣಿಕ ಅರ್ಹತೆ: ಫಿಟ್ಟರ್, ರ್ಟನರ್, ಮಷಿನಿಸ್ಟ್, ಎಲೆಕ್ಟ್ರಿಷಿಯನ್, ಸ್ಟ್ರಕ್ಚರಲ್ ವೆಲ್ಡರ್ ಆ್ಯಂಡ್ ಗ್ಯಾಸ್ ಕಟರ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಡ್ರಾಟ್ಸ್ಮೆನ್ (ಸಿವಿಲ್), ಸರ್ವೇಯರ್ ವಿಷಯಗಲ್ಲಿ ಐಟಿಐ ಮಾಡಿರಬೇಕು. ಅಪ್ರೇಂಟೀಸ್ ನಿಯಮ 1961ರ ಅಡಿಯಲ್ಲಿ ಈಗಾಗಲೇ ತರಬೇತಿ ಪಡೆದಿರುವ/ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ.
ವಯೋಮಿತಿ: 15.10.2021ಕ್ಕೆ ಅನುಗುಣವಾಗಿ ಕನಿಷ್ಠ 14 ವರ್ಷ, ಗರಿಷ್ಠ 24 ವರ್ಷ. ಎಸ್ಸಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋ ಸಡಿಲಿಕೆ ಇದೆ.
ದೈಹಿಕ ಅರ್ಹತೆ
ಎತ್ತರ- ಕನಿಷ್ಠ 137 ಸೆಂ.ಮೀ.
ತೂಕ - ಕನಿಷ್ಠ 25.4ಕೆಜಿ
ಎದೆಯ ಸುತ್ತಳತೆ - ಕನಿಷ್ಠ 3.8 ಸೆಂ.ಮೀ
ದೃಷ್ಟಿ - ಯಾವುದೇ ದೃಷ್ಟಿ/ ಕಣ್ಣಿನ ಸಮಸ್ಯೆ ಇರಬಾರದು.
ಆಯ್ಕೆ ಪ್ರಕ್ರಿಯೆ: ಐಟಿಐನಲ್ಲಿ ಪಡೆದ ಅಂಕ ಹಾಗೂ ಟ್ರೇಡ್ನಲ್ಲಿನ ಸಾಮರ್ಥ್ಯ ಪರಿಗಣಿಸಿ ತರಬೇತಿಗೆ ಶಾರ್ಟ್ ಲಿಸ್ಟ್ ಸಿದ್ಧಪಡಿಸಿ, ಅಭ್ಯರ್ಥಿಆಯ್ಕೆ ಮಾಡಲಾಗುವುದು. ಸ್ಥಳಿಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಸ್ಟೈಪೆಂಡ್: ಒಂದು ವರ್ಷದ ಐಟಿಐ ಕೋರ್ಸ್ ಮುಗಿಸಿರುವ ಅಭ್ಯರ್ಥಿಗಳಿಗೆ ಮಾಸಿಕ 7,700 ರೂ., 2 ವರ್ಷದ ಐಟಿಐ ಕೋರ್ಸ್ ಮಾಡಿದವರಿಗೆ ಮಾಸಿಕ 8,855 ರೂ. ಗೌರವಧನ ನೀಡಲಾಗುವುದು.
ಸೂಚನೆ: ಆಸಕ್ತ ಅಭ್ಯರ್ಥಿಗಳು ಮೊದಲು https://apprenticeshipindia.org ವೆಬ್ಸೈಟ್ನಲ್ಲಿ ಹೆಸರು ನೋಂದಾಯಿಸಿಕೊಂಡಿರಬೇಕು. ಈ ವೆಬ್ಸೈಟ್ನಲ್ಲಿ ನೋಂದಾಯಿತರಾಗದ ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ.
ಅರ್ಜಿ ಸಲ್ಲಿಸಲು ಕೊನೇ ದಿನ: 15.10.2021
ಅಧಿಸೂಚನೆಗೆ:https://bit.ly/3zTScol
ಮಾಹಿತಿಗೆ: http://npcilcareers.co.in