ಮಾನವ ಸರಪಳಿ ನಿರ್ಮಿಸಿ ಬಾಲಕಿಯರನ್ನು ರಕ್ಷಿಸಿದ ಯುವಕರು: ಮೈ ಝುಂ ಎನಿಸಿರುವ ವಿಡಿಯೋ ವೈರಲ್‌

video
Published on

ಬೀಜಿಂಗ್: ಬೆಂಕಿ ಕಾಣಿಸಿಕೊಂಡಿರುವ ಕಟ್ಟಡದಿಂದ ಮಾನವ ಸರಪಳಿ ನಿರ್ಮಿಸಿ ಇಬ್ಬರು ಬಾಲಕಿಯರನ್ನು ಯುವಕರು ರಕ್ಷಣೆ ಮಾಡಿರುವ ಘಟನೆ ಚೀನಾದ ಕ್ಸಿಂಟಿಯನ್‌ನಲ್ಲಿ ನಡೆದಿದೆ.

ಇದರ ವಿಡಿಯೋ ವೈರಲ್‌ ಆಗಿದ್ದು, ಆರು ಮಂದಿ ಯುವಕರ ಈ ಸಾಹಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇಲ್ಲಿಯ ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಇಬ್ಬರು ಬಾಲಕಿಯರು ಕಟ್ಟಡದೊಳಗೆ ಸಿಲುಕಿಕೊಂಡಿದ್ದರು.

ಇದನ್ನು ಗಮನಿಸಿದ ಕೆಲ ಯುವಕರು ಒಬ್ಬರ ಮೇಲೆ ಒಬ್ಬರಂತೆ ಚೈನ್ ತರ ನಿಂತು ಬೆಂಕಿ ಕಾಣಿಸಿಕೊಂಡ ಕಟ್ಟಡದಿಂದ ಬಾಲಕಿಯನ್ನು ಹೊರಗೆ ಎಳೆದು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಬಾಲಕಿಯರನ್ನು ರಕ್ಷಿಸುತ್ತಿರುವ ವೀಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು ಅದೀಗ ವೈರಲ್‌ ಆಗಿದೆ. 25 ಸೆಕೆಂಡ್ ವಿಡಿಯೋ ಇದಾಗಿದ್ದು ಇದಾಗಲೇ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಜೂನ್‌ ತಿಂಗಳ ವಿಡಿಯೋ ಇದಾಗಿದ್ದು, ಇದೀಗ ಭಾರಿ ಸದ್ದು ಮಾಡುತ್ತಿದೆ.

ವಿಡಿಯೋ ನೋಡಲು ಈ ಲಿಂಕ್‌ ಕ್ಲಿಕ್‌ ಮಾಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net