

ನವದೆಹಲಿ: ಹಿಂದೂ ಜನಜಾಗೃತಿ ಸಮಿತಿಯ 20 ವರ್ಷದ ವರ್ಷಾಚರಣೆಯ ನಿಮಿತ್ತ ಸಮಿತಿಯ ವತಿಯಿಂದ 'ಹರ್ ಘರ್ ಭಗವಾ' ಅಭಿಯಾನ ಪ್ರಾರಂಭಿಸಲಾಗಿದೆ.
ಇದೇ 3ರಿಂದ 5 ನೇ ತಾರೀಖಿನವರೆಗೆ ಈ ಅಭಿಯಾನ ನಡೆಯಲಿದೆ. ಈ ಅಭಿಯಾನದಲ್ಲಿ ಭಾಗವಹಿಸುವವರಿಗೆ ಹಿಂದೂ ರಾಷ್ಟ್ರ ವೀರ ಎಂಬ ಪ್ರಮಾಣಪತ್ರ ನೀಡಲಾಗುವುದು. ಈ ಪ್ರಮಾಣ ಪತ್ರ ಪಡೆಯಲು ನೀವು ಮಾಡಬೇಕಿರುವುದು ಇಷ್ಟು:
ತಮ್ಮ ಮನೆಯ ಮೇಲೆ ಭಗವಾ ಧ್ವಜವನ್ನು ಹಾರಾಡಿಸಬೇಕು. ಅದರ ಫೋಟೋ ಜತೆಗೆ ನಿಮ್ಮ ಹೆಸರು ಮತ್ತು ವಾಟ್ಸ್ಆ್ಯಪ್ ನಂಬರ್ http://Hindurashtra.hindujagruti.org ಈ ಲಿಂಕ್ನಲ್ಲಿ ತುಂಬಿಸಿ ಕಳುಹಿಸಬೇಕು. ಹೀಗೆ ಮಾಡಿದರೆ 'ಹಿಂದೂ ರಾಷ್ಟ್ರ ವೀರ' ಎಂಬ ಪ್ರಮಾಣಪತ್ರ ನಿಮ್ಮ ವಾಟ್ಸ್ಆ್ಯಪ್ ನಂಬರ್ಗೆ ಕಳುಹಿಸಲಾಗುವುದು ಎಂದು ಸಮಿತಿ ತಿಳಿಸಿದೆ. ಈಗಾಗಲೇ 6 ಲಕ್ಷಕ್ಕೂ ಅಧಿಕ ಜನರು ಸಹಭಾಗಿಯಾಗಿದ್ದಾರೆ ಎಂದು ಅದು ಹೇಳಿದೆ.
ಮನೆಯಲ್ಲಿ ಹಾರಾಡಿಸಿದ ಭಗವಾ ಧ್ವಜದ ಪೋಟೋವನ್ನು ಈ ಕೆಳಗಿನ ಸೋಷಿಯಲ್ ಮೀಡಿಯಾ ಅಕೌಂಟ್ಗೆ ಟ್ಯಾಗ್ ಮಾಡಬೇಕು.
ಟ್ವಿಟರ್ : @HinduJagrutiorg, @HJSKarnataka
ಫೇಸ್ಬುಕ್ : @JagoHinduBharat, @JagoHinduKarnataka,
Instagram : @JagoHinduBharat
ಟ್ವಿಟರ್ ಹ್ಯಾಶ್ ಟ್ಯಾಗ್ #HarGharBhagwa