

ನವದೆಹಲಿ: ಮಕ್ಕಳು ಏನು ಮಾಡಿದರೂ ಚೆಂದನೇ. ಕೆಲವೊಮ್ಮೆ ಗಂಭೀರ ವಿಷಯಗಳಲ್ಲಿಯೂ ಏನೂ ಅರಿಯದ ಮುಗ್ಧ ಪುಟಾಣಿಗಳು ತಮಗೆ ತಿಳಿದದ್ದನ್ನು ಮಾಡುತ್ತಾರೆ. ಆಗ ಅದು ಕೂಡ ಹಲವು ವೇಳೆ ಖುಷಿ ನೀಡುವುದುಂಟು.
ಅಂಥದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವಾರು ಮಂದಿ ಈ ವಿಡಿಯೋ ನೋಡಿ ಮೆಚ್ಚಿಕೊಂಡಿದ್ದಾರೆ.
https://twitter.com/RexChapman/status/1318935111627321347
ಅದೇನೆಂದರೆ, ಬಾಲಕಿಯೊಬ್ಬಳು ತನ್ನ ತಾಯಿ ಜತೆ ಚರ್ಚ್‍ಗೆ ಹೋಗಿದ್ದಾಳೆ. ಆ ವೇಳೆ ಪಾದ್ರಿಯವರು ಬಾಲಕಿಗೆ ಆಶೀರ್ವದಿಸಲು ಮುಂದಾಗಿದ್ದಾರೆ. ಪಾದ್ರಿ ಏನು ಮಾಡುತ್ತಿದ್ದಾರೆ ಎಂದು ತಿಳಿಯದ ಈ ಪುಟಾಟಿ, ಪಾದ್ರಿ ಕೈ ಮುಂದೆ ತರುತ್ತಿದ್ದಂತೆ ತನ್ನ ಕೈ ಸೇರಿಸಿ ಬಾಲಕಿ ಹೈ ಫೈ ಮಾಡಿ ಮುತ್ತಿಕ್ಕಿದ್ದಾಳೆ.
ಗಂಭೀರವಾಗಿದ್ದ ಪಾದ್ರಿ ಕೂಡ ಈ ಬಾಲಕಿ ಮಾಡಿದ್ದನ್ನು ಕಂಡು ನಗುವು ಬಂದರೂ ಅದನ್ನು ತಡೆದುಕೊಳ್ಳಲು ಪ್ರಯತ್ನಿಸಿ ಮಂದಹಾಸ ಬೀರಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಈ ವಿಡಿಯೋವನ್ನು ಮಾಜಿ ಬಾಸ್ಕೆಟ್ ಬಾಲ್ ಆಟಗಾರ ರೆಕ್ಸ್ ಚಪ್‍ಮಾನ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ತುಂಬಾ ಒಳ್ಳೆಯದನ್ನು ನೀವು ಇಂದು ನೋಡುತ್ತಿದ್ದೀರಿ ಎಂದು ಅವರು ಬರೆದಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಪುಟಾಣಿ ಜನರ ಮನಸ್ಸು ಗೆದ್ದಿದ್ದಾಲೆ. 22 ಲಕ್ಷ ಬಾರಿ ವೀಕ್ಷಣೆಯಾಗಿದೆ. 30 ಸಾವಿರಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. ಅಲ್ಲದೆ 6,300ಕ್ಕೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ.
ಮಗುವಿನ ಕಣ್ಣಿನ ಮೂಲಕ ಪ್ರಪಂಚ ನೋಡುವುದು ಅದ್ಭುತ ಕ್ಷಣ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.