ಹೃದ್ರೋಗಿಯ ಚಿಕಿತ್ಸೆ ಮಾಡುತ್ತಿದ್ದಂತೆಯೇ ಕುಸಿದುಬಿದ್ದ ಡಾಕ್ಟರ್‌: ಹೃದಯಾಘಾತದಿಂದ ‌ಸಾವು!

doctor
Published on

ಕಾಮಾರೆಡ್ಡಿ (ತೆಲಂಗಾಣ) : ಹೃದಯಾಘಾತಕ್ಕೆ ಒಳಗಾಗಿರುವ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುತ್ತಲೇ ವೈದ್ಯರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತೆಲಂಗಾಣದ ಕಾಮಾರೆಡ್ಡಿ ಎಂಬಲ್ಲಿ ನಡೆದಿದೆ.

ವೈದ್ಯ ಲಕ್ಷ್ಮಣ್​​ ಎಂಬುವವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಇವರು ಕಾಮಾರೆಡ್ಡಿಯ ಜಿಲ್ಲೆಯ ಗಾಂಧಾರಿ ಮಂಡಲದ ನಿವಾಸಿ ಸರ್ಜು ಎಂಬುವವರಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತವಾಗಿದೆ. ಸರ್ಜು ಅವರಿಗೆ ಹೃದಯಾಘಾತವಾಗಿತ್ತು. ಈ ವೇಳೆ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.

ಕೂಡಲೇ ಕಾರ್ಯಪ್ರವೃತ್ತರಾಗಿದ್ದ ಡಾ.ಲಕ್ಷ್ಮಣ್‌ ಚಿಕಿತ್ಸೆ ನೀಡುತ್ತಿದ್ದರು. ತಕ್ಞಣ ಅವರು ಕುಸಿದುಬಿದ್ದು ಅಲ್ಲಿಯೇ ಮೃತಪಟ್ಟಿದ್ದಾರೆ. ಸರ್ಜುವನ್ನು ಕಾಮಾರೆಡ್ಡಿ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತಾರೂ, ಮಾರ್ಗಮಧ್ಯೆ ಸರ್ಜು ಸಾವನ್ನಪ್ಪಿದ್ದಾರೆ. ಈ ನಡುವೆಯೇ ಚಿಕಿತ್ಸೆ ಮಾಡುವ ಪೂರ್ವದಲ್ಲಿಯೇ ರೋಗಿ ಸರ್ಜು ಕೂಡ ಮೃತಪಟ್ಟಿದ್ದಾರೆ.

ನಿಜಾಮಾಬಾದ್ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದ ಡಾ.ಲಕ್ಷ್ಮಣ್‌ ಅವರ ಸಾವಿಗೆ ಇಡೀ ಆಸ್ಪತ್ರೆ ಕಂಬನಿ ಮಿಡಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net