ಹನುಮಾನ್​ ಚಾಲೀಸಾ ವಿವಾದ: ಸಂಸದೆ, ಶಾಸಕ ದಂಪತಿಗೆ ಕೋರ್ಟ್​ ನೀಡಿತು ಜಾಮೀನು

hanuman-bail
Published on

ಮುಂಬೈ: ಹನುಮಾನ್ ಚಾಲೀಸಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಏಪ್ರಿಲ್ 23 ರಂದು ಬಂಧಿಸಿದರುಮುಂಬೈ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಮಹಾರಾಷ್ಟ್ರ ಸಂಸದೆ ನವ್​ನೀತ್ ರಾಣಾ ಹಾಗೂ ಆಕೆಯ ಪತಿ, ಶಾಸಕರೂ ಆಗಿರುವ ರವಿ ರಾಣಾ ಅವರಿಗೆ ಕೋರ್ಟ್​ ಜಾಮೀನು ನೀಡಿದೆ. ನವನೀತ್ ರಾಣಾ ಅಮರಾವತಿ ಸಂಸದರ ಲೋಕಸಭೆ ಸಂಸದೆಯಾಗಿದ್ದು, ರಾಣಾ ಮಹಾರಾಷ್ಟ್ರದ ಬದ್ನೇರಾ ವಿಧಾನಸಭಾ ಕ್ಷೇತ್ರದಿಂದ ಶಾಸಕ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ನಿವಾಸ ಮಾತೋಶ್ರೀ ಎದುರು ಹನುಮಾನ್ ಚಾಲೀಸಾ ಪಠಿಸುವುದಾಗಿ ಶಾಸಕ ರವಿ ರಾಣಾ ಹಾಗೂ ಸಂಸದೆ ನವ್​ನೀತ್ ರಾಣಾ ದಂಪತಿ ಬೆದರಿಕೆ ಒಡ್ಡಿರುವ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಸೇನೆಯ ಕಾರ್ಯಕರ್ತರು ನಗರದ ಹಲವೆಡೆ ಜಮಾಯಿಸಿದ್ದಲ್ಲದೆ, ಮಾತೋಶ್ರೀ ಮುಂದೆಯೂ ಸೇರಿದ್ದರು. ಅಲ್ಲದೆ ಶಿವಸೇನೆ ಕಾರ್ಯಕರ್ತರ ದೂರಿನ ಮೇರೆಗೆ ಪೊಲೀಸರು ಇವರನ್ನು ಬಂಧಿಸಿದ್ದರು.

ತಲಾ 50 ಸಾವಿರ ರೂಪಾಯಿಗಳ ಶ್ಯೂರಿಟಿ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಬಾರದು. ಸಾಕ್ಷ್ಯ ನಾಶ ಪಡಿಸಬಾರದು, ಯಾವುದೇ ಸಾಕ್ಷಿದಾರರ ಜತೆ ಯಾವುದೇ ರೀತಿಯ ಸಂಪರ್ಕ ಇಟ್ಟುಕೊಳ್ಳಬಾರದು ಎಂಬ ಷರತ್ತುಗಳನ್ನು ಕೋರ್ಟ್​ ವಿಧಿಸಿದೆ.

ತನಿಖೆಗೆ ಸಹಕರಿಸುವಂತೆ ದಂಪತಿಗೆ ನ್ಯಾಯಾಲಯ ಆದೇಶಿಸಿದೆ. ಜತೆಗೆ, ತನಿಖಾಧಿಕಾರಿ ಕರೆದರೆ ಹಾಜರಾಗಬೇಕು. ಠಾಣೆಗೆ ಕರೆಸುವಾಗ ಅಧಿಕಾರಿಗಳು ದಂಪತಿಗೆ ಕನಿಷ್ಠ 24 ಗಂಟೆಗಳ ಸೂಚನೆಯನ್ನು ನೀಡಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಇಂದು ರಾತ್ರಿಯೊಳಗೆ ದಂಪತಿ ಬಿಡುಗಡೆ ಆಗಲಿದ್ದಾರೆ ಎಂದು ಅವರ ಪರ ವಕೀಲರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net