BREAKING: ಕುತೂಹಲ ಕೆರಳಿಸಿದ ಹಾನಗಲ್‌ ಕ್ಷೇತ್ರ ಕಾಂಗ್ರೆಸ್‌ ತೆಕ್ಕೆಗೆ: 7325 ಮತಗಳ ಅಂತರದಲ್ಲಿ ಗೆಲುವು ಕಂಡ ಮಾನೆ

shreenivas
Published on

ಹಾನಗಲ್‌: ಅನೇಕ ಸುತ್ತುಗಳ ಮತ ಎಣಿಕೆಯವರೆಗೂ ಕುತೂಹಲ ಕೆರಳಿಸಿದ್ದ ಹಾನಗಲ್‌ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಭರ್ಜರಿ ಯಶಸ್ಸು ಕಂಡಿದ್ದಾರೆ.

ಬಿಜೆಪಿಯ ಶಿವರಾಜ ಶರಣಪ್ಪ ಸಜ್ಜನರ ಹಾಗೂ ಜೆಡಿಎಸ್​ನ ನಿಯಾಜ್ ಶೇಖ್ ಸೇರಿ ಒಟ್ಟು 13 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಮಾನೆ ಅವರಿಗೆ 83,324 ಮತಗಳು, ಶಿವರಾಜ ಅವರಿಗೆ 75,999 ಮತಗಳು ಹಾಗೂ ನಿಯಾಜ್ ಶೇಖ್ ಅವರಿಗೆ 866 ಮತಗಳು ಚಲಾವಣೆಗೊಂಡಿವೆ.

11 ಸುತ್ತಿನವರೆಗೂ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ನೆಕ್‌ ಟು ನೆಕ್‌ ಫೈಟ್‌ ಉಂಟಾಗಿತ್ತು. ಒಂದು ಸುತ್ತಿನಲ್ಲಿ ಕಾಂಗ್ರೆಸ್‌ ಯಶಸ್ಸು ಸಾಧಿಸಿದರೆ ಇನ್ನೊಂದು ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದರು. 13ನೇ ಸುತ್ತಿನ ಬಳಿಕ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಅಂತರ ಕಡಿಮೆಯಾಗುತ್ತಾ ಬಂದಿತ್ತು. ಆದ್ದರಿಂದ ಕೊನೆಯವರೆಗೂ ಭಾರಿ ಕುತೂಹಲ ಕೆರಳಿಸಿತ್ತು. ಕೊನೆಯ ಕೆಲವು ಸುತ್ತಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಾನೆ ಮುನ್ನಡೆ ಸಾಧಿಸಿಕೊಂಡು ಕೊನೆಗೆ ಗೆಲುವು ಕಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net