More

    BREAKING: ಸಿಂದಗಿಯಲ್ಲಿ ಬಿಜೆಪಿಗೆ ವಿಜಯದ ಮಾಲೆ: ಭಾರಿ ಅಂತರದಿಂದ ಗೆದ್ದ ಭೂಸನೂರ- ಅಧಿಕೃತ ಆದೇಶವೊಂದೇ ಬಾಕಿ

    ಸಿಂದಗಿ: ತೀವ್ರ ಕುತೂಹಲ ಕೆರಳಿಸಿರುವ ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ಇಂದು (ನ.2) ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದ್ದು, ಇದೀಗ ಸಿಂದಗಿಯ ಫಲಿತಾಂಶ ಪ್ರಕಟವಾಗಿದೆ. ಸಿಂದಗಿಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಸಿಕ್ಕಿದ್ದು, ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

    ಬಿಜೆಪಿಗೆ 74,463 ಮತಗಳು, ಕಾಂಗ್ರೆಸ್‌ಗೆ 49,897 ಮತ್ತು ಜೆಡಿಎಸ್‌ 3116 ಮತಗಳು ಬಿದ್ದಿವೆ. ಈ ಮೂಲಕ ಬಿಜೆಪಿಯ ರಮೇಶ್ ಭೂಸನೂರ ಭರ್ಜರಿ ಗೆಲುವು ಸಾಧಿಸಿದ್ದು, ಅವರು ಕಾಂಗ್ರೆಸ್​ನ ಅಶೋಕ ಮಲ್ಲಪ್ಪ ಮನಗೂಳಿ ಹಾಗೂ ಜೆಡಿಎಸ್ ನಾಜಿಯಾ ಅಂಗಡಿಯವರನ್ನು ಪರಾಭವಗೊಳಿಸಿದ್ದಾರೆ.

    ಎರಡೂ ಕ್ಷೇತ್ರಗಳಿಗೆ ಭಾನುವಾರ ಮತದಾನ ನಡೆದಿದ್ದು, ಹಾನಗಲ್ ಕ್ಷೇತ್ರದಲ್ಲಿ ಶೇ.83.72 ಹಾಗೂ ಸಿಂದಗಿ ಕ್ಷೇತ್ರದಲ್ಲಿ ಶೇ. 69.41ಮತದಾನವಾಗಿದೆ.

    ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ಒಟ್ಟು 19 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಈಗಾಗಲೆ ನಿರ್ಧರಿಸಿದ್ದಾರೆ. ಹಾನಗಲ್​ನಲ್ಲಿ ಬಿಜೆಪಿಯ ಶಿವರಾಜ ಶರಣಪ್ಪ ಸಜ್ಜನರ, ಕಾಂಗ್ರೆಸ್​ನಿಂದ ಶ್ರೀನಿವಾಸ ಮಾನೆ, ಜೆಡಿಎಸ್​ನ ನಿಯಾಜ್ ಶೇಖ್ ಸೇರಿ ಒಟ್ಟು 13 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಅದರ ಫಲಿತಾಂಶ ಇನ್ನಷ್ಟೇ ಗೊತ್ತಾಗಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts