ಕನ್ನಡದ ಸಂಶೋಧನೆಗಾಗಿ ಇರುವ ಏಕೈಕ ವಿವಿಯಲ್ಲೂ ಭ್ರಷ್ಟಾಚಾರದ ಆರೋಪ! ಹಾಲಿ-ಮಾಜಿ ವಿಸಿಗಳ ಫೈಟಿಂಗ್‌...

hampi
Published on

ವಿಜಯನಗರ: ಕನ್ನಡದ ಸಂಶೋಧನೆಗಾಗಿ ಇರುವ ಏಕೈಕ ವಿಶ್ವವಿದ್ಯಾಲಯವೆಂದರೆ ಅದು ಹಂಪಿ ಕನ್ನಡ ವಿಶ್ವವಿದ್ಯಾಲಯ. ಇಲ್ಲೀಗ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಹಾಲಿ ಮತ್ತು ಮಾಜಿ ಕುಲಪತಿಗಳ ನಡುವೆ ಘರ್ಷಣೆ ಶುರುವಾಗಿದೆ.

ಸದ್ಯ ವಿಶ್ವ ವಿದ್ಯಾಲಯದ ಎಲ್ಲಾ ಸಮಸ್ಯೆಗೆ ಮಾಜಿ ಕುಲಪತಿ ಡಾ. ಮಲ್ಲಿಕಾ ಘಂಟಿ ಅವರೇ ಕಾರಣ ಎಂದು ಕುಲಪತಿ ಸ.ಚಿ. ರಮೇಶ್ ಆರೋಪಿಸಿದ್ದಾರೆ. ಘಂಟಿ ಅವರ ಕಾಲಾವಧಿಯಲ್ಲಿ ಮಾಡಿದ ಆಡಿಟ್‌ನಲ್ಲಿ 23.18 ಕೋಟಿ ಆಕ್ಷೇಪವಿದೆ, ಇದರ ಪೈಕಿ 2. 33 ಕೋಟಿ ರೂಪಾಯಿ ಹಣ ವಸೂಲಾತಿ ಮಾಡಿದರೆ ವಿಶ್ವವಿದ್ಯಾಲಯದ ಅರ್ಧ ಸಮಸ್ಯೆ ಬಗೆಹರಿಯುತ್ತದೆ ಎಂದಿದ್ದಾರೆ.

ಈ ಬಗ್ಗೆ ಲಿಖಿತವಾಗಿ ಸ್ಪಷ್ಟನೆ ಕೊಟ್ಟಿರುವ ಡಾ. ಮಲ್ಲಿಕಾ ಘಂಟಿ ’ನಾನು ನಿಯಮ ಬಾಹಿರವಾಗಿ ಏನನ್ನೂ ಮಾಡಲಿಲ್ಲ. ಅಗತ್ಯಕ್ಕಿಂತ ಹೆಚ್ಚಾಗಿ ಸಂಶೋಧನಾರ್ಥಿಗಳನ್ನು ನೇಮಕ ಮಾಡಲಿಲ್ಲ. ಈ ಭಾಗದ ಹಿಂದುಳಿದ ಕಲ್ಯಾಣ- ಕರ್ನಾಟಕ ಭಾಗದ ಎಲ್ಲರಿಗೂ ಉನ್ನತ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ನಿಯಮ ಪ್ರಕಾರ ಸಂಶೋಧನಾರ್ಥಿಗಳನ್ನು ತುಂಬಿಕೊಳ್ಳಲಾಗಿದೆ ಅಷ್ಟೇ’ ಎಂದಿದ್ದಾರೆ.

ನಾನು ನಿಯಮ ಮೀರಿ ಒಂಬತ್ತು ಬೋಧಕ, ಐದು ಬೋಧಕೇತರ ಸಿಬ್ಬಂದಿ ನೇಮಕ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ನನ್ನ ಬಗ್ಗೆ ಇಲ್ಲಸಲ್ಲದ ಗಂಭೀರ ಆರೋಪ ಮಾಡಿರುವ ಸ.ಚಿ. ರಮೇಶ್ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net