ನೂರಾರು ಕೋಟಿ ರೂ. ಕಟ್ಟಡ, ಕಾರ್ಮಿಕರ ಜೀವ ಮಾತ್ರ ಬಲು ಅಗ್ಗ: ಭದ್ರತೆ ಇಲ್ಲದೇ ನಾಲ್ವರು ಕೆಲಸಗಾರರ ದುರ್ಮರಣ!

buidling
Published on

ಗುರುಗ್ರಾಮ: ನಿರ್ಮಾಣ ಹಂತದ ವಸತಿ ಕಟ್ಟಡ ಕಾಮಗಾರಿಯ ವೇಳೆ ದುರಂತವೊಂದು ಸಂಭವಿಸಿದ್ದು, ನಾಲ್ವರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ದೆಹಲಿಯ ಗುರುಗ್ರಾಮದಲ್ಲಿ ನಡೆದಿದೆ.

17 ನೇ ಮಹಡಿಗೆ ಟವರ್ ಕ್ರೇನ್ ಅಳವಡಿಸುವಾಗ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಓರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿವೆ. ಈತನ ಸ್ಥಿತಿ ಗಂಭೀರವಾಗಿದೆ. ಸೆಕ್ಟರ್-77 ರಲ್ಲಿ ಎಮಾರ್ ಪ್ಲಾಮ್ ಹಿಲ್ಸ್‌ನ ನಿರ್ಮಾಣ ಹಂತದ ವಸತಿ ಕಟ್ಟಡದಲ್ಲಿ ಈ ದುರಂತ ಸಂಭವಿಸಿದೆ. ಕಾರ್ಮಿಕರೆಲ್ಲರೂ ಬಿಹಾರ ಮೂಲದವರು ಎಂದು ತಿಳಿದುಬಂದಿದೆ.

17 ನೇ ಮಹಡಿಗೆ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸಲು ಬಳಸಿದ ಟವರ್ ಕ್ರೇನ್ ಸರಿಪಡಿಸಿದ ನಂತರ ಅಪಘಾತ ಸಂಭವಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಕ್ರೇನ್ ಸರಿಪಡಿಸಿದ ನಂತರ ಕಾರ್ಮಿಕರು ಜಾರಿ 12 ನೇ ಮಹಡಿ ಮೇಲೆ ಬಿದ್ದಿದ್ದಾರೆ. ಸಂಬಂಧಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಮನೇಸರ್ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಸುರೇಶ್ ಕುಮಾರ್ ತಿಳಿಸಿದ್ದಾರೆ.

ಇಲ್ಲಿ ಕಾರ್ಮಿಕರಿಗೆ ಯಾವುದೇ ರಕ್ಷಣೆ ನೀಡಲಾಗಿಲ್ಲ. ದುಬಾರಿ ಬೆಲೆಬಾಳುವ ಕಟ್ಟಡ ನಿರ್ಮಾಣವಾಗುತ್ತಿದ್ದರೂ, ಕಾರ್ಮಿಕರ ಜೀವ ಮಾತ್ರ ಬಲು ಅಗ್ಗವಾಗಿದೆ. ಸರಿಯಾದ ಭದ್ರತೆ ಇಲ್ಲದ ಕಾರಣ, ಈ ದುರಂತ ಸಂಭವಿಸಿದೆ ಎಂದು ಅಪಘಾತ ದೃಶ್ಯವನ್ನು ಕಣ್ಣಾರೆ ಕಂಡ ರವಿಕುಮಾರ್​ ವಿವರಿಸುತ್ತಾರೆ. 2010ರಿಂದ ಎಮಾರ್ ಪ್ಲಾಮ್ ಹಿಲ್ಸ್‌ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ದುರಂತ ನಡೆದಿರುವ ಕಟ್ಟಡದ ನಿರ್ಮಾಣ ಕಾರ್ಯವು 2018ರಿಂದ ಶುರುವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net