ನಡುರಸ್ತೆಯಲ್ಲಿಯೇ ರಾಜಾರೋಷವಾಗಿ ಓಡಾಡಿದ ಗುಜರಾತ್‌ ಸಿಂಹಗಳು: ನೋಡುಗರ ಎದೆಯಲ್ಲಿ ನಡುಕ!

lion
Published on

ಅಮ್ರೋಲಿ (ಗುಜರಾತ್​): ಐದು ಸಿಂಹಗಳು ನಡುರಸ್ತೆಯಲ್ಲಿಯೇ ಓಡಾಟ ನಡೆಸಿ ನೋಡುಗರನ್ನು ಭಯಭೀತರನ್ನಾಗಿ ಮಾಡಿದ ಘಟನೆ ಗುಜರಾತ್​​ನ ಅಮ್ರೋಲಿಯಲ್ಲಿ ನಡೆದಿದೆ.

ಗಿರ್​ ಅರಣ್ಯ ಪ್ರದೇಶದ ಸಿಂಹಗಳು ಹೀಗೆ ರಸ್ತೆಯ ಮೇಲೆ ಓಡಾಡಿವೆ. ಇವು ಯಾರ ಮೇಲೂ ದಾಳಿ ಮಾಡಲಿಲ್ಲ. ಕಳೆದ ಕೆಲ ದಿನಗಳ ಹಿಂದೆ ಕೂಡ ಇದೇ ರೀತಿಯಾಗಿ ಕೆಲ ಸಿಂಹಗಳು ಸುತ್ತಾಡಿದ್ದು, ಯಾರಿಗೂ ಹಾನಿ ಮಾಡದೇ, ಯಾರಿಗೂ ಕ್ಯಾರೇ ಮಾಡದೇ ಓಡಾಡಿಕೊಂಡಿದ್ದವು. ಆದರೆ ನೋಡುಗರು ಮಾತ್ರ ಕಂಗಾಲಾಗಿದ್ದಾರೆ.

ನಿನ್ನೆ ಓಡಾಡಿಕೊಂಡಿದ್ದ ಈ ಸಿಂಹಗಳ ವಿಡಿಯೋ ಅನ್ನು ಅಲ್ಲಿಯೇ ಹೋಗುತ್ತಿದ್ದವರೊಬ್ಬರು ಮೊಬೈಲ್‌ನಿಂದ ವಿಡಿಯೋ ಮಾಡಿಕೊಂಡಿದ್ದು, ಅದೀಗ ವೈರಲ್‌ ಆಗಿದೆ.

ನೀವೂ ನೋಡಿ ಈ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net