More

    ಮೋದಿ, ದೀದಿಗೆ ಬಾಂಗ್ಲಾ ಪ್ರಧಾನಿ ನೀಡಿದ್ರು 2.600 ಕೆಜಿ ಮಾವಿನ ಹಣ್ಣು! ಗಡಿ ದಾಟಿದ 260 ಬಾಕ್ಸ್‌

    ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ 2,600 ಕೆ.ಜಿ ಮಾವಿನ ಹಣ್ಣುಗಳನ್ನು ಕಳುಹಿಸಿದ್ದಾರೆ.

    ಹರಿಬಾಂಗ ತಳಿಯ ಮಾವಿನ ಹಣ್ಣುಗಳನ್ನು 260 ಪೆಟ್ಟಿಗೆಯಲ್ಲಿ ಹೊತ್ತ ಟ್ರಕ್‌ ಭಾರತದ ಗಡಿಯೊಳಕ್ಕೆ ಬಂದಿದೆ. ಬಾಂಗ್ಲಾದೇಶದ ರಂಗ್‌ಪುರ್‌ ಜಿಲ್ಲೆಯಲ್ಲಿ ವಿಶೇಷವಾಗಿ ಬೆಳೆದ ಮಾವಿನ ಹಣ್ಣಿನ ತಳಿ ಇದಾಗಿದೆ. ಎರಡೂ ದೇಶಗಳ ನಡುವಿನ ಬಾಂಧ್ಯವದ ಸಂಕೇತವಾಗಿ ಇದನ್ನು ಕಳುಹಿಸಲಾಗಿದೆ ಎಂದು ಬಾಂಗ್ಲಾ ಪ್ರಧಾನಿ ಹೇಳಿದ್ದಾರೆ.

    ದುಂಡುದುಂಡಾಗಿರುವ ಹರಿಬಾಂಗ ಮಾವಿನ ತಳಿಯು ಹೆಚ್ಚು ತಿರುಳಿರುವ, ನಾರಿನಂಶವಿಲ್ಲದ ಹಣ್ಣಾಗಿದೆ. ಇದು ಒಂದೊಂದು ಸಾಮಾನ್ಯವಾಗಿ 200 ರಿಂದ 400 ಗ್ರಾಂ ತೂಗುತ್ತದೆ. ಈ ಹಿಂದೆ ಭಾರತಕ್ಕೆ ಪಾಕಿಸ್ತಾನದ ಪ್ರಧಾನಿಯಾಗಿದ್ದ ಜಿಯಾ ಉಲ್ ಹಖ್‌ ಹಾಗೂ ಪರ್ವೇಜ್ ಮುಷರಫ್ ಸಹ ಮಾವಿನ ಹಣ್ಣುಗಳನ್ನು ಕಳುಹಿಸಿಕೊಟ್ಟಿದ್ದರು.

    ಆಮೀರ್‌ ಖಾನ್‌ ಡಿವೋರ್ಸ್‌ ಸುದ್ದಿ ಕೇಳಿ ‘ಥ್ಯಾಂಕ್‌ ಗಾಡ್‌’ ಎಂದ ನಟಿ ಸೋನಂ ಕಪೂರ್‌

    ಕರ್ನಾಟಕದ ನೂತನ ರಾಜ್ಯಪಾಲರಾಗಿ ಕೇಂದ್ರ ಸಚಿವ ತಾವರ್‌ಚಂದ್‌ ಗೆಹ್ಲೋಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts