'ಇಂಗ್ಲಿಷ್​ನಲ್ಲಿ ಮಾತಾಡ್ತಿಯಾ ಮಗನೇ...' ಎಂದು ನಾಯಿ ಛೂ ಬಿಟ್ಟು ಕಚ್ಚಿಸಿದ ಹಿಂದಿವಾಲಾ!

dog
Published on

ನವದೆಹಲಿ: ಇಂಗ್ಲಿಷ್​ ಮಾತನಾಡಿದ ಯುವಕನ ಮೇಲೆ ಕೋಪಗೊಂಡ ವ್ಯಕ್ತಿಯೊಬ್ಬ ನಾಯಿ ಛೂ ಬಿಟ್ಟು ನಾಲ್ಕಾರು ಬಾರಿ ಕಚ್ಚಿಸಿರುವ ಭಯಾನಕ ಘಟನೆ ದೆಹಲಿಯಲ್ಲಿ ನಡೆದಿದೆ.

ಮಾಜಿ ಲೆಫ್ಟಿನೆಂಟ್​ ಸಿ.ವಿ. ಬಹದ್ದೂರ್​ ಅವರ ಮೊಮ್ಮಗ ಅಂಶುಮಾನ್​ ಅವರು ನಾಯಿ ಕಚ್ಚಿಸಿಕೊಂಡವರಾಗಿದ್ದಾರೆ. ಡೆಹ್ರಾಡೂನ್​ ನಿವಾಸಿಯಾಗಿರುವ ಅಂಶುಮಾನ್​ ಸದ್ಯ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಅವರು ಅಂಗಡಿಗೆ ಹೋದಾಗ ಇಂಗ್ಲಿಷ್​ನಲ್ಲಿ ಮಾತನಾಡಿದ್ದಾರೆ. ಇದನ್ನು ಕೇಳಿ ಅಲ್ಲಿದ್ದ ವ್ಯಕ್ತಿಯೊಬ್ಬ ಕೆರಳಿದ್ದಾನೆ. ನೀನು ನೇಪಾಳಿಗನಾ ಎಂದು ಕೇಳಿದ್ದಾನೆ. ಆಗ ಅಂಶುಮಾನ್​ ಅವರು ತಮ್ಮ ಪರಿಚಯ ಮಾಡಿಕೊಂಡು, ನೇಪಾಳಿಗ ಅಲ್ಲ ಎಂದಿದ್ದಾರೆ.

ಆದರೂ ಸುಮ್ಮನೆ ಇರದ ವ್ಯಕ್ತಿ, ನೀನು ನೇಪಾಳಿಗನೇ. ಅದಕ್ಕೆ ಇಂಗ್ಲಿಷ್​ನಲ್ಲಿ ಮಾತನಾಡುತ್ತಿರುವೆ, ಮಗನೇ ನಿಲ್ಲು ನಿನಗೆ ಮಾಡಿಸುವೆ ಎಂದು ತನ್ನ ಜತೆ ತಂದಿರುವ ನಾಯಿಯನ್ನು ಅಂಶುಮಾನ್​ ಮೇಲೆ ಛೂ ಬಿಟ್ಟಿದ್ದಾನೆ. ಅದು ಹೋಗಿ ಕಚ್ಚಿದೆ. ಇದರಿಂದ ಹೆದರಿಗೆ ಅಂಶುಮಾನ್​ ಅವರು ಅಂಗಡಿಯೊಳಕ್ಕೆ ಓಡಿಹೋಗಿದ್ದಾಋಎ. ಆದರೂ ಬಿಡದ ವ್ಯಕ್ತಿ ನಾಯಿಯನ್ನು ಅಲ್ಲಿಯೇ ಬಿಟ್ಟು ನಾಲ್ಕಾರು ಬಾರಿ ಕಚ್ಚಿಸಿದ್ದಾನೆ.

ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಹೋದ ಅಂಶುಮಾನ್​ ಚಿಕಿತ್ಸೆ ಪಡೆದು ಅಪರಿಚಿತ ವ್ಯಕ್ತಿ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net