

ಚೆನ್ನೈ: ಶತ ಶತಮಾನಗಳ ಕನಸು ಈಡೇರುವ ದಿನವಿಂದು. ಅತ್ತ ಅಯೋಧ್ಯೆಯಲ್ಲಿ ಈಗಾಗಲೇ ರಾಮಮಂದಿರ ನಿರ್ಮಾಣದ ಶುಭ ಕಾರ್ಯಕ್ರಮಗಳು ಶುರುವಾಗಿರುವ ಬೆನ್ನಲ್ಲೇ ಇತ್ತ ಚೆನ್ನೈನಲ್ಲಿ ಕಲಾವಿದರೊಬ್ಬರು ರಾಮನ ಪ್ರತಿಮೆಯನ್ನು ತಯಾರಿಸಿದ್ದಾರೆ.
ಅಷ್ಟಕ್ಕೂ ಈ ಪ್ರತಿಮೆ ಇಷ್ಟು ಪ್ರಸಿದ್ಧಿಯಾಗಲು ಕಾರಣವೇನೆಂದರೆ ಇದನ್ನು 1.2 ಗ್ರಾಂ ಚಿನ್ನ ಬಳಸಿ ತಯಾರು ಮಾಡಲಾಗಿರುವ ಪುಟ್ಟ ಪ್ರತಿಮೆ. ಇದರ ಅಳತೆ ಕೇವಲ ಒಂದು ಇಂಚು.
ತಮಿಳುನಾಡಿನ ಕೊಯಮತ್ತೂರಿನ ಚಿಕಣಿ ಕಲಾವಿದ ಮರಿಯಪ್ಪನ್ ಈ ಪ್ರತಿಮೆಯನ್ನು ತಯಾರಿಸಿದ್ದಾರೆ.
ಮರಿಯಪ್ಪನ್ 1.2 ಗ್ರಾಂ ಚಿನ್ನವನ್ನು ಇದಕ್ಕಾಗಿ ಬಳಸಿದ್ದಾರೆ. ಇಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಇದರ ನೆನಪಿಗಾಗಿ ಮರಿಯಪ್ಪನ್ ಚಿನ್ನದ ರಾಮನ ಪ್ರತಿಮೆಯನ್ನು ತಯಾರಿಸಿದ್ದು, ಇದನ್ನು ಅಯೋಧ್ಯೆಗೆ ಕಳುಹಿಸಿರುವುದಾಗಿ ಅವರು ಹೇಳಿದ್ದಾರೆ.