ಗೋಲ್ಡ್‌ ಮ್ಯಾನ್‌ ಬಳಿ ಇದೆ ಚಿನ್ನದ ಮಾಸ್ಕ್‌: ಇದರೊಳಗೇ ಇದೆ ಸ್ಯಾನಿಟೈಸರ್‌- 36 ತಿಂಗಳ ವ್ಯಾಲಿಡಿಟಿ!

mask
Published on

ಕಾನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕಾನ್ಪುರದ 'ಗೋಲ್ಡನ್ ಬಾಬಾ' ಎಂದೇ ಪ್ರಖ್ಯಾತರಾಗಿರುವವರು ಮನೋಜ್ ಸೆಂಗರ್‌ ಅಕಾ. ಇವರನ್ನು 'ಮನೋಜಾನಂದ ಮಹರಾಜ್' ಎಂದೇ ಗೌರವದಿಂದ ಕರೆಯಲಾಗುತ್ತದೆ.

ಚಿನ್ನದ ಮೇಲೆ ಭಾರೀ ಮೋಹ ಇರುವ ಮನೋಜ್‌ ಬಳಿ ಒಟ್ಟಾರೆ ಎರಡು ಕಿಲೋಗ್ರಾಂ ತೂಗುವ ಚಿನ್ನಾಭರಣಗಳ ಸಂಗ್ರಹವಿರುವ ಕಾರಣ ಇವರನ್ನು 'ಗೋಲ್ಡನ್ ಬಾಬಾ' ಎಂದು ಕರೆಯಲಾಗುತ್ತದೆ. ಇದೀಗ ಇವರು ಚಿನ್ನದ ಮಾಸ್ಕ್‌ ಒಂದನ್ನು ತಯಾರಿಸಿಕೊಂಡು ಸಕತ್‌ ಫೇಮಸ್‌ ಆಗಿದ್ದಾರೆ.

ಈ ಮಾಸ್ಕ್‌ ಐದು ಲಕ್ಷ ರೂಪಾಯಿ ಮೌಲ್ಯದ್ದಾಗಿದೆ. ಇದರ ವಿಶೇಷತೆ ಎಂದರೆ ಈ ಮಾಸ್ಕ್‌ನಲ್ಲಿ ಸ್ಯಾನಿಟೈಸರ್‌ ದ್ರವವಿದೆ. ಇದು 36 ತಿಂಗಳು ಕೆಲಸ ಮಾಡಲಿದೆಯಂತೆ. ಈ ಮಾಸ್ಕ್‌ಗೆ ಮನೋಜ್ ಇಟ್ಟಿರುವ ಹೆಸರು 'ಶಿವ್‌ ಶರಣ್ ಮಾಸ್ಕ್'.

ಅಂದಹಾಗೆ ಇವರ ಮೈಮೇಲೆ ಸದಾ ಚಿನ್ನದ ರಾಶಿಯೇ ಇರುತ್ತದೆ. ಒಟ್ಟಾರೆ 250 ಗ್ರಾಂ ತೂಗುವ ನಾಲ್ಕು ಚಿನ್ನದ ಸರಗಳನ್ನು ಧರಿಸಿದ್ದು, ಕಾಂಚ್‌ ಕವಚ, ಮೀನು ಹಾಗೂ ಆಂಜನೇಯನ ಲಾಕೆಟ್‌ ಇವರ ಬಳಿ ಸದಾ ಇರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net