

ಉತ್ತರ: ನೀವು ಹೆದರ ಬೇಡಿ. ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಹಾಕಿದರೆ, ಪ್ರಕರಣ ದಾಖಲಾದಾಗಲಿನಿಂದ ಪ್ರಾರಂಭವಾಗಿ ಕಡೆಯದಿನದವರೆಗೆ, ವಿಚ್ಛೇದನ ಪಡೆಯಲು ಇಬ್ಬರ ಒಪ್ಪಿಗೆಯೂ ಇರಲೇ ಬೇಕು.
ಈ ಮಧ್ಯೆ ನಿಮ್ಮಲ್ಲಿ ಯಾರೊಬ್ಬರು ಬೇಕಾದರೂ ಒಪ್ಪಿಗೆಯನ್ನು ಹಿಂದೆ ಪಡೆಯಬಹುದು. ಒಬ್ಬರು ಕೋರ್ಟಿಗೆ ಹೋಗದಿದ್ದರೂ , ಪ್ರಕರಣ ಹದಿನೆಂಟು ತಿಂಗಳ ನಂತರ ವಜಾ ಆಗುತ್ತದೆ. ನಿಮಗೆ ಒಪ್ಪಿಗೆ ಇಲ್ಲದಿದ್ದರೆ , ನಿಮ್ಮ ಒಪ್ಪಿಗೆಯನ್ನು ಹಿಂದೆ ಪಡೆದಿದ್ದೇನೆ ಎಂದು ನ್ಯಾಯಾಲಯಕ್ಕೆ ಮೆಮೊ ಸಹ ಹಾಕಬಹುದು.
ಯಾವುದಕ್ಕೂ ಒಮ್ಮೆ ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ಕೇಳಿಕೊಳ್ಳಿ. ಅಲ್ಲಿ ಮಧ್ಯಸ್ಥಿಕೆಗಾರರ ಮೂಲಕ ಮಾತಾಡಿದಾಗ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು. ಏನೂ ಒಪ್ಪಂದ ಆಗದಿದ್ದರೆ, ನಿಮ್ಮ ಪಾಡಿಗೆ ನೀವು ಮಗುವಿನ ಕಸ್ಟಡಿ ಕೇಳಿ ಪ್ರಕರಣ ದಾಖಲಿಸಿ.