ಕೈದಿಯನ್ನು ತರುತ್ತಿದ್ದ ವಾಹನ ಸ್ಫೋಟ: ಆರೋಪಿ ಸೇರಿದಂತೆ ನಾಲ್ವರು ಪೊಲೀಸರ ದುರ್ಮರಣ

accident
Published on

ಭಬ್ರು (ರಾಜಸ್ಥಾನ): ದೆಹಲಿಯಿಂದ ಗುಜರಾತ್‌ಗೆ ಕೈದಿಯೊಬ್ಬನನ್ನು ಕರೆತರುವ ಸಮಯದಲ್ಲಿ ಪೊಲೀಸ್‌ ವಾಹನ ಅಪಘಾತವಾಗಿದ್ದು, ಕೈದಿ ಸೇರಿದಂತೆ ನಾಲ್ವರು ಪೊಲೀಸರು ಮೃತಪಟ್ಟಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಆರೋಪಿಯೊಬ್ಬನನ್ನು ದೆಹಲಿಯಿಂದ ಗುಜರಾತ್‌ ಕರೆತರುತ್ತಿದ್ದ ಗುಜರಾತ್ ಪೊಲೀಸರ ಫಾರ್ಚೂನರ್ ಕಾರು ಭಬ್ರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತಕ್ಕೀಡಾಗಿದೆ. ಕಾರು ಡಿವೈಡರ್ ಮೇಲೆ ಹರಿದು, ಮರಕ್ಕೆ ಡಿಕ್ಕಿ ಹೊಡೆದಿದೆ. ನಂತರ ಸ್ಫೋಟ ಸಂಭವಿಸಿ ಅವಘಡ ಸಂಭವಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ‘ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ’ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net