LIVE: ಪ್ರಧಾನಿ ಮೋದಿಯಿಂದ ಫಿಟ್​ನೆಸ್​ ಕ್ಷೇತ್ರದ ದಿಗ್ಗಜರ ಜತೆ ಸಂವಾದ

940668
Published on

ನವದೆಹಲಿ: ಫಿಟ್ ಇಂಡಿಯಾ ಚಳವಳಿಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ದೇಶಾದ್ಯಂತ ಆಯೋಜಿಸಲಾಗುತ್ತಿರುವ ಆನ್‌ಲೈನ್ ಫಿಟ್ ಇಂಡಿಯಾ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫಿಟ್‌ನೆಸ್ ದಿಗ್ಗಜರ ಜತೆ ಸಂವಾದ ನಡೆಸುತ್ತಿದ್ದಾರೆ.

ನಿತ್ಯಜೀವನದಲ್ಲಿ ಫಿಟ್​ನೆಸ್ ಇರಲೇಬೇಕು. ಆದರೆ ಕೋವಿಡ್ -19 ರ ಕಾಲದಲ್ಲಿ ಫಿಟ್‌ನೆಸ್ ಜೀವನದ ಇನ್ನೂ ಪ್ರಮುಖ ಅಂಶವಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳ ಫಿಟ್​ನೆಸ್​ ಪ್ರಭಾವಿ ವ್ಯಕ್ತಿಗಳ ಜತೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ಸಂವಾದ ನಡೆಸುತ್ತಿದ್ದಾರೆ. ​

ಈ ಸಂವಾದ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ, ಮಿಲಿಂದ್ ಸೋಮನ್, ರುಜುಟಾ ದಿವೇಕರ್ ಸೇರಿದಂತೆ ಅನೇಕ ಮಂದಿ ಪಾಲ್ಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net