ಸಮುದ್ರದದಲ್ಲಿ ಗಾಳ ಹಾಕಿದ ಮೀನುಗಾರರಿಗೆ ಹೊಡೀತು ಲಾಟರಿ; ಸಿಕ್ಕೇಬಿಡ್ತು 271 ಕೆ.ಜಿ. ತೂಕದ ಮೀನು!

fish
Published on

ಸೌತ್‌ವೇಲ್ಸ್‌: ಸಮುದ್ರದಲ್ಲಿ ಗಾಳ ಹಾಕಿದ ಮೀನುಗಾರರು ಹಿಂದೆಂದೂ ಕಂಡರಿಯದ ಬೃಹದಾಕಾರದ ಮೀನೊಂದನ್ನು ಕಂಡಿದ್ದು ಅವರು ಸಂತಸದಲ್ಲಿ ತೇಲಾಡಿಹೋಗಿದ್ದಾರೆ. ಇಂಥದ್ದೊಂದು ಗಜಗಾತ್ರದ ಮೀನು ಕಂಡುಬಂದದ್ದು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ.

ಈ ಮೀನನ್ನು ತೂಗಿದಾಗ 271 ಕೆಜಿಯಷ್ಟಿತ್ತು. ಟ್ಯೂನಾ ಜಾತಿಗೆ ಸೇರಿರುವ ಮೀನು ಇದಾಗಿದ್ದು, ಇದೀಗ ದಾಖಲೆಯ ಪಟ್ಟಿಯಲ್ಲಿ ಸೇರಲು ಸನ್ನದ್ಧವಾಗಿದೆ. ಆದರೆ ಅಷ್ಟರಲ್ಲಿಯೇ ಇದು ನೂರಾರು ಮಂದಿಯ ಹೊಟ್ಟೆಯನ್ನು ಸೇರಲಿದೆ!

148 ಕೆಜಿ ಮತ್ತು 185 ಸೆಂ.ಮೀ ಉದ್ದದ ಟ್ಯೂನಾ‌ ತಳಿಯ ಮೀನು ಇಲ್ಲಯೇ ಈ ಹಿಂದೆ ಸಿಕ್ಕಿತ್ತು. ಅದು ಬೃಹತ್‌ ಮೀನು ಎಂದು ದಾಖಲೆ ಮಾಡಿತ್ತು. ಇದೀಗ ದಾಖಲೆಯನ್ನು ಈ ಮೀನು ಮುರಿದಿದೆ.

ಇದನ್ನು ಕಾಫ್ಸ್ ಹಾರ್ಬರ್ ಬಳಿ ಲಾಂಗ್‌ಲೈನರ್ ಹಡಗಿನಿಂದ ಹಿಡಿಯಲಾಗಿದ್ದು, ಕ್ಲಾಡಿಯೊ ಸೀಫುಡ್‌ಗೆ ಮಾರಾಟ ಮಾಡಲಾಗಿದೆ, ಇದು ಸಿಡ್ನಿಯಲ್ಲಿನ ಬಹಳಷ್ಟು ಜಪಾನೀಸ್ ರೆಸ್ಟೋರೆಂಟ್‌ಗಳಿಗೆ ಆಹಾರ ಪೂರೈಸಲು ಸಹಾಯ ಮಾಡುತ್ತದೆ ಎಂದು ಮೂಲಗಳು ಹೇಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net