ಮಾಲ್‌ಗೆ ಬೆಂಕಿ: ಷಾಪಿಂಗ್‌ ಮಾಡುತ್ತಿದ್ದ 27 ಮಂದಿ ಸಜೀವ ದಹನ- ಹಲವರ ಸ್ಥಿತಿ ಚಿಂತಾಜನಕ

fire
Published on

ಒಸಾಕ: ಷಾಪಿಂಗ್‌ ಮಾಲ್‌ಗೆ ಬೆಂಕಿ ಬಿದ್ದಿದ್ದು, 27 ಮಂದಿ ಸಜೀವ ದಹನಗೊಂಡಿರುವ ಭೀಕರ ಘಟನೆ ಪಶ್ಚಿಮ ಜಪಾನ್‌ನ ಒಸಾಕಾದಲ್ಲಿನಲ್ಲಿ ನಡೆದಿದೆ.

ಕಿಟಾಶಿಂಚಿಯ ಶಾಪಿಂಗ್ ಮತ್ತು ಮನರಂಜನಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ನಾಲ್ಕನೆಯ ಅಂತಸ್ತಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಎಲ್ಲೆಡೆ ದಟ್ಟ ಹೊಗೆಯಾಡುತ್ತಿದ್ದು, ಬೆಂಕಿ ಬೆಂಕಿ ಎಂದು ಕೂಗಿದರು. ಇದರಿಂದ ಅನೇಕ ಮಂದಿ ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಕೆಲವರು ತಪ್ಪಿಸಿಕೊಳ್ಳುವ ಭರದಲ್ಲಿ ದಹಿಸಿ ಹೋಗಿದ್ದಾರೆ.

ಹೆಚ್ಚಿನ ಮಂದಿ ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ ಎಂದು ಒಸಾಕಾ ನಗರದ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಅಕಿರಾ ಕಿಶಿಮೊಟೊ ತಿಳಿಸಿದ್ದಾರೆ. ಹಲವರ ಸ್ಥಿತಿ ಚಿಂತಾಜನಕವಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಕಟ್ಟಡದಲ್ಲಿ ಕ್ಲಿನಿಕ್ ಇತ್ತು. ಜತೆಗೆ ಹಲವಾರು ಪುಸ್ತಕದ ಮಳಿಗೆಗಳು ಇದ್ದವು. ಎಲ್ಲವೂ ಹೊತ್ತಿ ಉರಿದಿದೆ. ಪ್ರಾಥಮಿಕ ತನಿಖೆಯಲ್ಲಿ ಬೆಂಕಿಗೆ ನಿಖರ ಕಾರಣ ತಿಳಿದುಬಂದಿಲ್ಲ. 70 ಅಗ್ನಿಶಾಮಕ ದಳದ ತಂಡಗಳು ಬೆಂಕಿ ನಂದಿಸಲು ಹರಸಹಾಸ ಪಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net